ರಾಷ್ಟ್ರ ಸುದ್ದಿ

ದೆಹಲಿಯಲ್ಲಿ ಮೊಳಗಿದ ರೈತ ಕಹಳೆ

ನವದೆಹಲಿ: ಸಾಲಮನ್ನಾ ಸೇರಿದಂತ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ರೈತರ ದಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಸಂಂಸತ್ತಿನ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದೆ. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ 1000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆೆ ಎಂದು ಶುಕ್ರವಾರ ತಿಳಿದುಬಂದಿದೆ.
ಪ್ರತಿಭಟನೆಗ ಕರ್ನಾಟಕ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ದಹಲಿಗೆ ರೈತರು ಆಗಮಿಸಿದ್ದಾರೆ. ನಿನ್ನೆ ಮಧ್ಯಾಹ್ನ ರಾಮ್ ಲೀಲಾ ಮೈದಾನ ಸೇರಿದ್ದ ರೈತ ಸಮುದಾಯ, ಅಯೋಧ್ಯೆ ಬೇಡ, ಸಾಲ ಮನ್ನಾ ಬೇಕು ಎಂಬ ಘೋಷಣೆಗಳನ್ನು ಕೂಗುವ ಮೂಲಕ, ತಮ್ಮ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಯತ್ನ ಮಾಡಿತು. ರೈತರು, ಕೃಷಿ ಕಾರ್ಮಿಕರು ಸೇರಿದಂತ ಒಟ್ಟು 207 ರೈತ ಸಂಘಟನೆಗಳು, ತಮ್ಮ ಬೇಡಿಕೆಗಾಗಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರ ಸಮಿತಿ ಬ್ಯಾನರ್ ಅಡಿ ಒಟ್ಟುಗೂಡಿವೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ದಕ್ಷಿಣ ಭಾರತ ನದಿ ಜೋಡಮ ಕೃಷಿ ಸಂಘಟನೆಯ 1200 ಸದಸ್ಯರು, ಆತ್ಮಹತ್ಯೆಗ ಶರಣಾದ ಇಬ್ಬರು ರೈತರ ತಲೆಬುರುಡೆ ಹೊತ್ತು ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಶುಕ್ರವಾರದ ಸಂಸತ್ ರ್ಯಾಲಿಗೆ ಅವಕಾಶ ನೀಡದಿದ್ದಲ್ಲಿ ನಗ್ನ ಮೆರವಣಿಗೆ ಮಾಡುವುದಾಗಿ ತಮಿಳುನಾಡು ರೈತರು ಬೆದರಿಕೆ ಹಾಕಿದ್ದಾರೆ.

ಇದರಂತೆ ಇಂದು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ರೈತರು, ಸಂಸತ್ತಿನಲ್ಲಿ ಕಾಲ್ನಡಿಗೆ ಜಾಥಾ ನಡೆಸಲಿದ್ದಾರೆ. ಈಗಾಗಲೇ ರಾಮ್ ಲೀಲಾ ಮೈದಾನದಿಂದ ಸಾವಿರಾರು ರೈತರು ಸಂಸತ್ ನತ್ತ ಹೆಜ್ಜೆ ಹಾಕಿದ್ದು, ಭದ್ರತೆಗಾಗಿ 3,500 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

About the author

ಕನ್ನಡ ಟುಡೆ

Leave a Comment