ರಾಷ್ಟ್ರ ಸುದ್ದಿ

ದೆಹಲಿ, ಉತ್ತರಪ್ರದೇಶದ 16 ಕಡೆ ಎನ್ಐಎ ದಾಳಿ: ಇಸಿಸ್ ನಂಟು ಪತ್ತೆ, 10 ಮಂದಿ ಬಂಧನ

ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಇಸಿಸ್) ಉಗ್ರ ಸಂಘಟನೆಯ ನಂಟು ಇರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಉತ್ತರಪ್ರದೇಸ ಹಾಗೂ ರಾಜಧಾನಿ ದೆಹಲಿಯ ಒಟ್ಟು 16 ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಕಾರ್ಯಾಚರಣೆ ನಡೆಸುತ್ತಿದ್ದು, ಈ ವೇಳೆ 10 ಮಂದಿಯನ್ನು ಬಂಧನಕ್ಕೊಳಪಡಿಸಿದೆ ಎಂದು ಬುಧವಾರ ತಿಳಿದುಬಂದಿದೆ.
ಕಾರ್ಯಾಚರಣೆ ಹರ್ಕತ್ ಉಲ್ ಹರ್ಬ್ ಇ ಇಸ್ಲಾಂ ಎಂಬ ಹೊಸ ಉಗ್ರ ಸಂಘಟನೆ ನಂಟು ಕೂಡ ಪತ್ತೆಯಾಗಿದ್ದು, ಎನ್ಐಎ ಅಧಿಕಾರಿಗಳು ಕಾರ್ಯಾಚರಣೆ  ಮುಂದುವರೆಸಿದ್ದಾರೆಂದು ಎನ್ಐಎ ವಕ್ತಾರರು ಮಾಹಿತಿ ನೀಡಿದ್ದಾರೆ. ಉತ್ತರಪ್ರದೇಶ ಅಮ್ರೋಹಾ ಎಂಬ ಪ್ರದೇಶವನ್ನು ಅಧಿಕಾರಿಗಳು ಸುತ್ತುವರೆದಿರುವುದು ಕಂಡು ಬಂದಿದ್ದು, ಈ ಪ್ರದೇಶದಲ್ಲಿ ಐವರು ಶಂಕಿತರನ್ನು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. ಡಿ.19 ರಂದು ಚೆನ್ನೈನ ಮೂವರು ಪ್ರದೇಶಗಳು ಸೇರಿ ತಮಿಳುನಾಡಿನ ಒಟ್ಟು 7 ಪ್ರದೇಶಗಳಲ್ಲಿ ಎನ್ಐಎ ದಾಳಿ ನಡೆಸಿತ್ತು.

About the author

ಕನ್ನಡ ಟುಡೆ

Leave a Comment