ರಾಷ್ಟ್ರ ಸುದ್ದಿ

ದೆಹಲಿ: ಸಿಗ್ನೇಚರ್ ಸೇತುವೆ ಮೇಲೆ ಸ್ಟಂಟ್, ಇಬ್ಬರು ಬೈಕ್ ಸವಾರರ ದುರ್ಮರಣ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡ  ಸಿಗ್ನೇಚರ್ ಸೇತುವೆ ಮೇಲೆ ಸಾಹಸ ಪ್ರದರ್ಶಿಸಲು ಹೋಗಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸೇತುವೆ ನಿರ್ಮಾಣಕ್ಕೆ 8 ವರ್ಷಗಳ ಕಾಲ ತೆಗೆದುಕೊಂಡಿದ್ದು, ನವೆಂಬರ್ 4 ರಿಂದ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು.

ಹೊಸ ಸೇತುವೆ ಮೇಲೆ ಸಂಚಾರಿ ಉಲ್ಲಂಘನೆ ಜೊತೆಗೆ ಪ್ರಾಣಕ್ಕೂ ಸಂಚಕಾರ ತಂದುಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಕೆಲ ವಾರದ ಹಿಂದೆಯೇ ಎಂಜಿನಿಯರ್ ಮಾರ್ವೆಲ್ ಹೇಳಿದ್ದರು.ಯಮುನಾ ನದಿಯವರೆಗೂ 2, 214 ಅಡಿ ಸೇತುವೆ ನಿರ್ಮಿಸಲಾಗಿದ್ದು, 505 ಅಡಿ ಎತ್ತರದ ವೀಕ್ಷಣಾ ಗ್ಯಾಲರಿಯನ್ನು ಹೊಂದಿದೆ.  ಸೇತುವೆ ಉದ್ಘಾಟನೆ ನಂತರ , ಎಲ್ಲೆಂದರಲ್ಲಿ ವಾಹನ ನಿಲುಗಡೆ , ಏಕ ಪಥ ಸಂಚಾರ ನಿಯಮ ಉಲ್ಲಂಘನೆ ಮತ್ತಿತರ ಪ್ರಕರಣಗಳು ಹೆಚ್ಚಾಗುತ್ತಿವೆ.

About the author

ಕನ್ನಡ ಟುಡೆ

Leave a Comment