ರಾಜ್ಯ

ದೇವೇಗೌಡರನ್ನು ಆಸ್ಟ್ರೇಲಿಯಾ ಡೆಪ್ಯೂಟಿ ಕಾನ್ಸುಲೇಟ್​ ಜನರ್​ಲ್​ ಭೇಟಿ ಮತ್ತು ಚರ್ಚೆ

ಬೆಂಗಳೂರು: ಆಸ್ಟ್ರೇಲಿಯಾದ ಡೆಪ್ಯೂಟಿ ಕಾನ್ಸುಲೇಟ್​ ಜನರಲ್​ ಜಾನ್​ ಬೋನಾರ್​ ಅವರು ಇಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರನ್ನು ಪದ್ಮನಾಭನಗರದ ಅವರ ನಿವಾಸದಲ್ಲಿ ಭೇಟಿಯಾದರು. ಈ ವೇಳೆ ರಾಜ್ಯ ವಿಧಾನಸಭೆ ಚುನಾವಣೆಯ ಕುರಿತು ಚರ್ಚೆ ನಡೆಸಿ ಮಾಹಿತಿ ಪಡೆದರು.

ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡೆಪ್ಯೂಟಿ ಕಾನ್ಸುಲೇಟ್​ ಜನರಲ್​ ಜಾನ್​ ಬೋನಾರ್​, ಆಸ್ಟ್ರೇಲಿಯಾ, ಭಾರತ ಎರಡೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡ ರಾಷ್ಟ್ರಗಳಾಗಿವೆ. ಹೀಗಾಗಿ ಇವತ್ತಿನ ಭೇಟಿಯಲ್ಲಿ ಚುನಾವಣೆ ಕುರಿತು ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದೇವೆ. ರಾಜ್ಯದಲ್ಲಿನ ಭ್ರಷ್ಟಾಚಾರ, ಕಾವೇರಿ ನದಿ ವಿವಾದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದೆವು. ಕರ್ನಾಟಕದ ಜನರ ಬಗ್ಗೆ ದೇವೇಗೌಡ ಅಭಿಮಾನ ಹೊಂದಿದ್ದಾರೆ. ಪ್ರಧಾನಿಯಾಗಿದ್ದಾಗ ದೇವೇಗೌಡರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನಂತರ ಮಾತನಾಡಿದ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ, ಪ್ರಸ್ತುತ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಜಾನ್​ ಬೋನಾರ್​ ಮಾಹಿತಿ ಪಡೆದರು. ಚುನಾವಣೆಗಳು ನಡೆಯುವಾಗ ಹೀಗೆ ರಾಜಕೀಯ ಮುಖಂಡರೊಂದಿಗೆ ಅವರು ಚರ್ಚೆ ನಡೆಸುವುದು ಸಾಮಾನ್ಯ ಸಂಗತಿ. ಭೇಟಿ ವೇಳೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಗ್ಗೆಯೂ ಮಾಹಿತಿ ಪಡೆದರು. ರಾಜ್ಯದಲ್ಲಿ ಲೋಕಾಯುಕ್ತ, ಕೆಪಿಎಸ್ಸಿ ಅವ್ಯವಸ್ಥೆ ಬಗ್ಗೆಯೂ ತಿಳಿಸಿದ್ದೆನೆ ಎಂದರು.

 

FacebookTw

 

 

 

About the author

ಕನ್ನಡ ಟುಡೆ

Leave a Comment