ರಾಜ್ಯ ಸುದ್ದಿ

ದೇವೇಗೌಡರ ಸಂಬಂಧಿಕರೆಂದು ಹೇಳಿಕೊಂಡ ದಂಪತಿಯಿಂದ 20 ಕೋಟಿ ರು.ಪಂಗನಾಮ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಸಂಬಂಧಿಕರೆಂದು ಹೇಳಿಕೊಂಡ ದಂಪತಿ ಜನರ ವಿಶ್ವಾಸ ಗಳಿಸಿ ಸುಮಾರು 20 ಕೋಟಿ ರು ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಲಗ್ಗೆರೆ ಸಮೀಪದ ಪ್ರೀತಿನಗರದ ಕಿರಣ್ ಮತ್ತು ಸೌಭಾಗ್ಯ ಪಶ್ಚಿಮ ಬೆಂಗಳೂರಿನಲ್ಲಿ  ಡಿಪಾರ್ಟ್ ಮೆಂಟಲ್ ಸ್ಟೋರ್ ನಡೆಸುತ್ತಿದ್ದು, ಜನರ ವಿಶ್ವಾಸ ಗಳಿಸುವ ಸಲುವಾಗಿ, ತಾವು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹತ್ತಿರದ ಸಂಬಂಧಿಗಳು ಎಂದು ಹೇಳಿದ್ದಾರೆ. ಜಮೀನು ಕೊಡಿಸುವುದಾಗಿ ಹೇಳಿ ಸುಮಾರು 20 ಕೋಟಿ ರು ಹಣ ವಂಚಿಸಿದ್ದಾರೆ.
ಈ ಸಂಬಂಧ ಅಕ್ಟೋಬರ್9 ರಂದು ರಾಜಗೋಪಾಲನಗರದ ಸಿ, ವಿಜಯ್ ಕುಮಾರ್, ದಂಪತಿ ವಿರುದ್ದ ದೂರು ದಾಖಲಿಸಿದ್ದರು. ವಿಜಯ್ ಕುಮಾರ್ ತಾವು ಆಸ್ಪತ್ರೆ ನಿರ್ಮಿಸಲು ಜಾಗ ಕೊಂಡುಕೊಳ್ಳಲು ಸಿದ್ದರಿದ್ದು ಅದಕ್ಕಾಗಿ ಭೂಮಿ ಬೇಕೆಂದು ಹೇಳಿದ್ದರು. ದಂಪತಿ ತಮ್ಮ ಜಮೀನನ್ನು ಅವರಿಗೆ ಮಾರಾಟ ಮಾಡುವುದಾಗಿ ನಂಬಿಸಿ1.90 ಕೋಟಿ ರು ಹಣ ವಸೂಲಿ ಮಾಡಿದ್ದರು. ಜೊತೆಗೆ ವಿಜಯ್ ಕುಮಾರ್ ಅವರಿಗೆ ಜಮೀನಿಗೆ ಸಂಬಂಧಿಸಿದ ದಾಖಲಾತಿ ಗಳನ್ನು ನೀಡಿದ್ದರು, ಇದನ್ನು ಪರಿಶೀಲಿಸಿದ ದೂರುದಾರ ಅದು ನಕಲಿ ಎಂದು ತಿಳಿದು ಬಂದಿದೆ. ಪೊಲೀಸರಿಗೆ ಮತ್ತೊಂದು ಇದೇ ರೀತಿಯ ದೂರು ದಾಖಲಾಗಿರುವುದು ತಿಳಿದು ಬಂದಿದೆ, ಡಾ. ಪೂರ್ಣೇಶ್ ಎಂಬುವರ ನಕಲಿ ಜಿಪಿಎ ಪ್ರಮಾಣ ಪತ್ರ ನೀಡಿ ನಾಗರಭಾವಿಯಲ್ಲಿರುವ ಅವರ ನಿವೇಶನವನ್ನು ಮಾರಾಟ ಮಾಡುವುದಾಗಿ ಹೇಳಿ ಸುಮಾರು 20 ಕೋಟಿ ರು ವಂಚಿಸಿದ್ದಾರೆ.
ಈ ಸಂಬಂಧ ಪೊಲೀಸರು ದಂಪತಿಗಾಗಿ ಹುಡುಕಾಟ ನಡೆಸುತ್ತಿದ್ದು, ಕಿರಣ್ ಮತ್ತು ಸೌಭಾಗ್ಯ ದಂಪತಿ  ನವೆಂಬರ್ 3 ರಂದು ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ತಾವು ಮುಗ್ದರೆಂದು ಹೇಳಿಕೊಂಡಿದ್ದಾರೆ,  ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

About the author

ಕನ್ನಡ ಟುಡೆ

Leave a Comment