ರಾಷ್ಟ್ರ

ಬೆಳಗಾವಿಯಲ್ಲಿ ದೇಶದಲ್ಲಿಯೇ ಅತಿ ಎತ್ತರದ ಧ್ವಜಸ್ಥಂಬ

ಬೆಳಗಾವಿ: ನಗರದ ಕಿಲ್ಲಾ ಕೆರೆಯ ಆವರಣದಲ್ಲಿ ನಿರ್ಮಿಸಲಾದ ದೇಶದ ಅತ್ಯಂತ ಎತ್ತರದ ರಾಷ್ಟ್ರಧ್ವಜ ಸ್ಥಂಬವುಳ್ಳ ರಾಷ್ಟ್ರಧ್ವಜವನ್ನು ಸೋಮವಾರ ಇಂದು ದೇಶಕ್ಕೆ ಸಮರ್ಪಿಸಲಾಗಿತು.ಈ ಐತಿಹಾಸಿಕ ಸಮಾರಂಭಕ್ಕೆ ಸಾವಿರಾರು ಜನರು ಸಾಕ್ಷಿಯಾದರು.

ಶಾಸಕ “ಫಿರೋಜ್ ಸೇಠ್” ಅವರ ಆಸಕ್ತಿಯಿಂದಾಗಿ ತಲೆಯೆತ್ತಿರುವ ಈ ಧ್ವಜಸ್ಥಂಬದ ರಾಷ್ಟ್ರಧ್ವಜಾರೋಹಣವನ್ನು ಉಸ್ತುವರಿ ಸಚಿವ ರಮೇಶ ಜಾರಕಿಹೊಳಿ ನೆರವೇರಿಸಿದರು.

ಜಿಲ್ಲಾಧಿಕಾರಿ ಜಿಯಾ ಉಲ್ಲಾ, ಜಿಲ್ಲಾ ಪಂಚಾಯತ್ ಸಿಇಓ ರಾಮಚಂದ್ರನ್, ಮಹಾನಗರ ಪಾಲಿಕರಯ ಆಯುಕ್ತ ಶಶಿಧರ್ ಕುರೇರ,ಬೂಡಾ ಆಯುಕ್ತ ಶಕೀಲ್ ಅಹ್ಮದ್ ಸೇರಿದಂತೆ ನೂರಾರು ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂ,ಸಿಖ್ಬ್ಮು,ಸ್ಮಿಮ್ ಮತ್ತು ಕ್ರೈಸ್ತ ಧರ್ಮ ಗುರುಗಳ ಉಪಸ್ಥಿತಿ ಗಮನ ಸೆಳೆಯಿತು.ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.ಕಿಲ್ಲಾ ಕೆರೆಯ ಆವರಣ ತುಂಬಿ ತುಳುಕುತ್ತಿತ್ತು.

ಸಮಾರಂಭವು ಅಗಷ್ಟ15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭವನ್ನು ನೆನಪಿಸುವಂತಿತ್ತು.ಧ್ವಜ ಸ್ಥಂಬದ ನಿರ್ಮಾಣದಲ್ಲಿ ಬೆಳಗಾವಿ ನಗರಭಿವೃದ್ಧಿ ಪ್ರಾಧಿಕಾರದ ಪಾತ್ರವೂ ಹಿರಿದಾಗಿದೆ.

ಧ್ವಜ ಸ್ಥಂಬದ ಎತ್ತರ 110 ಮೀಟರ್

ಧ್ವಜದ ಅಳತೆ 36.60 *24.40 ಮೀಟರ್(80*120)

ಧ್ವಜ ಸ್ಥಂಬದ ವ್ಯಾಸ ಕಳಭಾಗ 1.90 ಮೀಟರ್ ಮೇಲ್ಭಾಗ 0.60 ಮೀಟರ್.

ಇದಕ್ಕೆ ತಲುಪಿದ ಅಂದಾಜು ಮೊತ್ತ 1 ಕೋಟಿಯ 62 ಲಕ್ಷದ 50 ಸಾವಿರ ರೂಪಾಯಿ.

About the author

ಕನ್ನಡ ಟುಡೆ

Leave a Comment