ರಾಜಕೀಯ

ದೇಶದಲ್ಲಿ ಬ್ರಿಟಿಷರ ಆಳ್ವಿಕೆ‌ ಮತ್ತೆ ನಡೆಯುತ್ತಿದೆ: ಮೋದಿ ಸರಕಾರದ ವಿರುದ್ಧ ಮುನಿಯಪ್ಪ ಆಕ್ರೋಶ

ರಾಮನಗರ: ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧಸಂಸದ ಕೆ.ಎಚ್.ಮುನಿಯಪ್ಪ ಹರಿಹಾಯ್ದಿದ್ದಾರೆ. ದೇಶ ಯಾವ ಕಡೆ ಹೋಗುತ್ತಿದೆ. ಬ್ರಿಟಿಷರ ಆಳ್ವಿಕೆ‌ ಮತ್ತೆ ನಡೆಯುತ್ತಿದೆ ಎಂದು ಸಂಸದ ಆಕ್ರೋಶ ವ್ಯಕ್ತಪಡಿಸಿದರು. ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದ ಕೆ.ಎಚ್.ಮುನಿಯಪ್ಪ, ಸಾಂವಿಧಾನಿಕ ಸೈದ್ದಾಂತಿಕ ನಿರ್ಣಯ ರಾಷ್ಟ್ರೀಯ ಪರಿಸ್ಥಿತಿಯನ್ನು ಅಧೋಗತಿಗೆ ಇಳಿಸಿದ್ದಾರೆ. ಅನ್ನದಾತರ ಆತ್ಮಹತ್ಯೆ ಪ್ರಮಾಣ ಹೆಚ್ಚಳವಾಗಿದೆ. ಬಡವರಿಗೆ ನ್ಯಾಯ ದೊರೆಯುತ್ತಿಲ್ಲ. ದೇಶ ಯಾವ ಕಡೆ ಹೋಗುತ್ತಿದೆ. ಬ್ರಿಟಿಷರ ಆಳ್ವಿಕೆ‌ ಮತ್ತೆ ನಡೆಯುತ್ತಿದೆ” ಎಂದು ಬಿಜೆಪಿ ಸರಕಾರದ ವಿರುದ್ಧ ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

”ಈ ಮಹಾಯುದ್ದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದೆ. ನಾನು 28 ವರ್ಷಗಳಿಂದ ಪಾರ್ಲಿಮೆಂಟ್ ನಲ್ಲಿದ್ದೇನೆ. ಆದರೆ, ಮೋದಿ ಬಂದ ನಂತರ ಗಂಡಾತರ ಉಂಟಾಗಿದೆ. ಕೋಮು ಗಲಭೆಗಳಿಲ್ಲದೇ ಶಾಂತಿಯಿಂದ ದೇಶ ಮುನ್ನಡೆಸಲು ಮೈತ್ರಿ ಪಕ್ಷವನ್ನು ಬೆಂಬಲಿಸಬೇಕು. ಬಿಜೆಪಿಯಂತಹ ಕೋಮುವಾದಿ ಪಕ್ಷಗಳು ತಲೆ ಎತ್ತಿದರೆ, ದೇಶದಲ್ಲಿ ಅಶಾಂತಿ ಉಂಟಾಗುತ್ತದೆ ಎಂಬ ಕಾರಣಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಸಾಲಮನ್ನಾ ಮಾಡಿದ್ದಾರೆ. ಕಾಂಗ್ರೆಸ್ ಸಹ ಅವರ ಜತೆಗಿದೆ” ಎಂದು ಸಂಸದ ತಿಳಿಸಿದ್ದಾರೆ.

ಅಲ್ಲದೆ, ”ಸುರೇಶ್ ನನ್ನ ಆಪ್ತ ಮಿತ್ರರು. ಅವರು ಗೆಲ್ಲಬೇಕು. ದೇಶದ ಅಳಿವು- ಉಳಿವು ಇದೀಗ ಮತದಾರರ ಕೈಯಲ್ಲಿದೆ. ಉದ್ದಿಮೆಗಳಿಗೆ ಮಾತ್ರ ವರದಾನವಾಗಿದೆ. ರೈತರಿಗೆ ಕೇಂದ್ರ ಸರಕಾರ ಬಿಡಿಗಾಸು ಸಹ ಮನ್ನಾ ಮಾಡಿಲ್ಲ.ಆದರೆ, ನಮ್ಮ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಸಾಲ ಮನ್ನಾ ಮಾಡಿತ್ತು. ಇಂತಹ ಕಮ್ಮಿಟ್ಮೆಂಟ್‌ ಪ್ರಧಾನಿಗಳಿಗಿಲ್ಲ. ಬದುಕು ಎಲ್ಲರಿಗು ಊಟ ಬಟ್ಟೆ ಕೊಡುತ್ತದೆ. ಆದರೆ, ಈ ಜೀವನದಲ್ಲಿ ಏನು ಮಾಡಿದ್ದೇವೆ ಎಂಬುದು ಮುಖ್ಯ. ಹೀಗಾಗಿ ಮತದಾರರು ದೇಶವನ್ನು ಉಳಿಸಲು, ಶಾಂತಿ ನೆಲೆಸಲು, ಕೋಮುವಾದಿ ದೂರದಲ್ಲಿಟ್ಟು ಅನ್ನದಾತರನ್ನು ಉಳಿಸಲು ಕಾಂಗ್ರೆಸ್ ಬೆಂಬಲಿಸಿ” ಎಂದು ಸಂಸದ ಕೆ.ಎಚ್.ಮುನಿಯಪ್ಪ ಬೆಂಗಳೂರು ಗ್ರಾಮಾಂತರ ಲೋಕಸಭೆ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತ ಯಾಚಿಸಿದರು.

ತೇಜಸ್ವಿ ಸೂರ್ಯ ಅಂಬೇಡ್ಕರ್ ವೃತ್ತ ತೆರವು ಎನ್ನುತ್ತಾರೆ. ಬಿಜೆಪಿ ಸಂವಿಧಾನವನ್ನೇ ಬದಲಿಸಲು ಮುಂದಾಗಿದೆ. ಈ ಹಿನ್ನೆಲೆ ಸುರೇಶ್ ಅವರಿಗೆ ಆರ್ಶೀವಾದ ಮಾಡಿ. ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆ ಎಂದು ಭವಿಷ್ಯ ನುಡಿದರು. ಅಲ್ಲದೆ, ಈ ಪ್ರಯತ್ನ ಸತತವಾಗಿ ನಡೆದಿದೆ. ಯಡಿಯೂರಪ್ಪ ಹಿರಿಯರು. ಅಪಾರ ಗೌರವ ಇದೆ. ನನ್ನ ಗೆಲುವು ಗೊತ್ತಿದೆ. ಏಳು ಬಾರಿ ಗೆಲುವು ಸಾಧಿಸಿದವನಿಗೆ, ಈ ಭಾರಿ ಗೆಲುವು ಸಾಧಿಸುವುದು ನನಗೆ ಗೊತ್ತಿದೆ. ಪ್ರತಿ ಬಾರಿ ಶಾಸಕರು ವಿರೋಧ ಮಾಡುತ್ತಾರೆ. ಅವರ ಬೆಂಬಲ ಇಲ್ಲದಿದ್ದರೂ, ನಾನು ಗೆಲ್ಲುತ್ತೇನೆ. ಪಕ್ಷ ನನಗೆ ಟಿಕೆಟ್ ನೀಡುತ್ತಲೆ ಇರುತ್ತದೆ. ನಾನು ಗೆಲ್ಲುತ್ತಲೇ ಇರುತ್ತೇನೆ. ಮುಳುಬಾಗಿಲಿನ ಮಾಜಿ ಶಾಸಕರು‌ ಮಾತ್ರ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎಂದು ತಮ್ಮ ಗೆಲುವಿನ ಬಗ್ಗೆ ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಾನೇ ಕರೆದುಕೊಂಡು ಹೋಗುತ್ತೆನೆ. ರಸ್ತೆ, ರೈಲ್ವೆ, ಇಂಡಸ್ಟ್ರಿಯಲ್ ಏರಿಯಾ ನೋಡಿ. ಮೋದಿ 5 ವರ್ಷದಲ್ಲಿ ಯಾರಿಗು ಕೆಲಸ ಕೊಟ್ಟಿಲ್ಲ. ನಾನು 50ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದೇನೆ. ನನಗೆ ಬೆಂಬಲವಾಗಿರುವುದೇ ಒಕ್ಕಲಿಗರು ಎಂದು ರಾಮನಗರದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

About the author

ಕನ್ನಡ ಟುಡೆ

Leave a Comment