ಸಿನಿ ಸಮಾಚಾರ

ದೇಶದಲ್ಲಿ ಮೋದಿ ಅಲೆ ಕಡಿಮೆ ಆಗಿದೆ ಎನ್ನುವುದು ಶುದ್ಧ ಸುಳ್ಳು: ನಟಿ, ಬಿಜೆಪಿ ನಾಯಕಿ ಶೃತಿ

ಹಾಸನ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಕಡಿಮೆಯಾಗಿದೆ ಎನ್ನುವುದು ಸುಳ್ಳು ಎಂದು ನಟಿ, ಬಿಜೆಪಿ ನಾಯಕಿ ಶೃತಿ ಪ್ರತಿಪಾದಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ದೇಶದ ಚುನಾವಣೆ. ಪ್ರಧಾನಿ ನರೇಂದ್ರ ಮೋದಿ ಅವರ ಮರು ಆಯ್ಕೆಯನ್ನು ಬಹುತೇಕರು ಬಯಸುತ್ತಿದ್ದಾರೆ. ಹೀಗಾಗಿ ಪ್ರಧಾನಿ ಅವರ ಹೆಸರಲ್ಲಿ ಎಲ್ಲಡೆ ಪ್ರಚಾರ ನಡೆಸುತ್ತಿದ್ದೇವೆ ಎಂದು ಹೇಳಿದರು. ಕರ್ನಾಟಕದಲ್ಲಿ ಡಾ.ರಾಜಕುಮಾರ್ ಹೆಸರು ಹೇಗೆ ಶಕ್ತಿಯೋ ಹಾಗೇ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹೆಸರು ಕೂಡ ಒಂದು ಬಲಿಷ್ಠ ಶಕ್ತಿ. ಮೋದಿ ಹೆಸರಲ್ಲೇ ಮೋಡಿ ಇದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ 5 ವರ್ಷ ಸಾಲದು. ಇನ್ನೂ ಐದು ವರ್ಷದ ಅವಶ್ಯಕತೆ ಇದೆ ಎಂದು ತಿಳಿಸಿದರು. ಅರಕಲಗೂಡು, ಹಳೆ ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎ,ಮಂಜು ಪರ ಪ್ರಚಾರ ಮಾಡಲಿದ್ದೇನೆ. ಹಾಸನದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ವರಿಷ್ಠರು ಸೂಚನೆ ಕೊಟ್ಟರೆ, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುತ್ತೇನೆ ಎಂದು ಶೃತಿ ತಿಳಿಸಿದ್ದಾರೆ. ಹಾಗೆಯೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗುವುದು ನನಗೂ ಸಂತೋಷದ ವಿಷಯ ಎಂದು ಹೇಳಿದ ಶೃತಿ, ಅನಂತ್ ಕುಮಾರ್ ಪತ್ನಿಗೆ ಟಿಕೆಟ್ ತಪ್ಪಿದ ವಿಚಾರಕ್ಕೆ ನೋ ಕಾಮೆಂಟ್ ಎಂದು ಹೇಳಿ ಜಾರಿಕೊಂಡರು.

About the author

ಕನ್ನಡ ಟುಡೆ

Leave a Comment