ರಾಷ್ಟ್ರ ಸಾಂಸ್ಕ್ರತಿಕ

ದೇಶದ ಪ್ರಥಮ ಸಾಂಸ್ಕೃತಿಕ ಉದ್ಯಾನ : ಮಲ್ಲತ್ತಹಳ್ಳಿಯ ಕಲಾಗ್ರಾಮ

ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ರಂಗಭೂಮಿ ಸೇರಿ ವಿವಿಧ ಸ್ತ್ರೀ ಕಲಾ ಚಟುವಟಿಕೆಗಳ ತಾಣವಾಗಿರುವ ನಗರದ ಕಲಾಗ್ರಾಮ ದೇಶದ ಪ್ರಥಮ ಸಾಂಸ್ಕೃತಿಕ ಉದ್ಯಾನವಾಗಿ ರೂಪುಗೊಳ್ಳಲಿದೆ. 30 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಲಾಗ್ರಾಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ಇದೀಗ ಹಂತ ಹಂತವಾಗಿ 5 ಅಭಿವೃದ್ಧಿಪಡಿಸುವ ಮೂಲಕ ಸಾಂಸ್ಕೃತಿಕ ಉದ್ಯಾನವನ್ನಾಗಿಸಲು ಯೋಜಿಸಲಾಗಿದೆ.

ಕಲಾಕೇಂದ್ರಗಳಿಗೆ ಸಿಗಲಿದೆ ನಲೆ:

ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ನಾಟಕಶಾಲೆ, ಲಲಿತಕಲಾ ಅಕಾಡೆಮಿಯ ಗ್ರಾಫಿಕ್ಸ್ ಕಲಾ ಕೇಂದ್ರ, ಶಿಲ್ಪಕಲಾ ಅಕಾಡೆಮಿಯ ಗ್ಯಾಲರಿ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕ ಏಕೀಕರಣಗೊಂಡ 50 ವರ್ಷಗಳ ಸವಿ ನೆನಪಿಗೆ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ನಿರ್ಮಿಸಲಾಗಿದೆ. ಇದೀಗ ಕುವೆಂಪು ಭಾಷಾ ಭಾರತಿ ಪಕ್ಕದಲ್ಲಿಯೇ 3 ಎಕರೆ ವಿಶಾಲ ಪ್ರದೇಶದಲ್ಲಿ ರಾಷ್ಟ್ರೀಯ ನಾಟಕಶಾಲೆ (ಎನ್‌ಎಸ್‌ಡಿ) ಕಟ್ಟಡ ತಲೆಯೆತ್ತಿದೆ. ಈ ಕಟ್ಟಡ ಜುಲೈನಲ್ಲಿ ಉದ್ಘಾಟನೆಯಾಗಲಿದೆ. ಅದೇ ರೀತಿ ಸೆಂಟ್ರಲ್ ಕಾಲೇಜಿನಲ್ಲಿ ಕಚೇರಿ ಹೊಂದಿರುವ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಬಯಲು ರಂಗಮಂದಿರದ ಪಕ್ಕದಲ್ಲಿಯೇ ಸ್ಥಳ ಗುರುತು ಮಾಡಲಾಗಿದೆ.

About the author

ಕನ್ನಡ ಟುಡೆ

Leave a Comment