ರಾಷ್ಟ್ರ ಸುದ್ದಿ

ದೇಶದ 10 ವಿವಿಗಳಲ್ಲಿ ಕೃತಕ ಬುದ್ಧಿಮತ್ತೆ ಲ್ಯಾಬ್: ಮೈಕ್ರೋಸಾಫ್ಟ್ ಇಂಡಿಯಾ ಘೋಷಣೆ

ಬೆಂಗಳೂರು: ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮುಂಚೂಣಿ ಸ್ಥಾನವನ್ನು ಆಕ್ರಮಿಸುತ್ತಿರುವ ಸೂಚನೆಗಳ ನಡುವೆಯೇ ದೇಶದ 10 ವಿವಿಗಳಲ್ಲಿ ಸದ್ಯವೇ ಎಐ ಲ್ಯಾಬ್‌ಗಳು ಸ್ಥಾಪನೆಯಾಗಲಿವೆ. ತಂತ್ರಜ್ಞಾನ ದಿಗ್ಗಜ ಮೈಕ್ರೊಸಾಫ್ಟ್‌ ಇಂಡಿಯಾ 10 ವಿವಿಗಳಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಪ್ರಯೋಗಾಲಯ ಸ್ಥಾಪಿಸಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕಂಪನಿ ಉದ್ದೇಶಿಸಿದೆ. ಮುಂದಿನ 3 ವರ್ಷಗಳಲ್ಲಿ 10,000 ಡೆವಲಪರ್‌ಗಳ ತಂತ್ರಜ್ಞಾನ ಕೌಶಲ್ಯ ವೃದ್ಧಿಗೂ ನಿರ್ಧರಿಸಿದೆ.

ಭಾರತದಲ್ಲಿ ಸರಕಾರಿ ಹಾಗೂ ಖಾಸಗಿ ವಲಯದ 700ಕ್ಕೂ ಹೆಚ್ಚು ಸಂಸ್ಥೆಗಳು ತನ್ನ ಎಐ ತಂತ್ರಜ್ಞಾನ ಬಳಸುತ್ತಿವೆ. ಇವುಗಳಲ್ಲಿ ಶೇ.60ರಷ್ಟು ಬೃಹತ್‌ ಉದ್ದಿಮೆಗಳು ಎಂದು ಮೈಕ್ರೋಸಾಫ್ಟ್‌ ಹೇಳಿದೆ. ಲ್ಯಾಬ್‌ ಸ್ಥಾಪನೆಯಿಂದ ವಿದ್ಯಾರ್ಥಿಗಳಿಗೆ ಕ್ಲೌಡ್‌ ಕಂಪ್ಯೂಟಿಂಗ್‌, ಹಬ್‌, ಡೇಟಾ ಸೈನ್ಸ್‌, ಎಐ ಮತ್ತು ಐಒಟಿಯಲ್ಲಿ ಕೌಶಲ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮೈಕ್ರೊಸಾಫ್ಟ್‌ ಇಂಡಿಯಾದ ಅಧ್ಯಕ್ಷ ಅನಂತ್‌ ಮಹೇಶ್ವರಿ ತಿಳಿಸಿದ್ದಾರೆ.

ಗೇಮ್‌ ಚೇಂಜರ್‌ :

-ಎಐ ಈಗಾಗಲೇ ದೇಶದ ಉದ್ಯಮ ವಲಯದ ಸ್ವರೂಪವನ್ನೇ ಬದಲಿಸಿದೆ.
-ಹೊಸ ಲ್ಯಾಬ್‌ಗಳಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಕಲಿಕೆ ಅವಕಾಶ ಲಭ್ಯ
-ಉದ್ದಿಮೆ, ಶಿಕ್ಷಣ, ಆರೋಗ್ಯ, ಕೌಶಲ್ಯ, ಕೃಷಿ ಕ್ಷೇತ್ರಕ್ಕೆ ಭಾರಿ ಅನುಕೂಲ

About the author

ಕನ್ನಡ ಟುಡೆ

Leave a Comment