ರಾಷ್ಟ್ರ ಸುದ್ದಿ

ದೇಶಾದ್ಯಂತ #MeToo ಅಬ್ಬರ, ಆದರೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರೇ ಬಂದಿಲ್ಲ

ನವದೆಹಲಿ: ದೇಶದಾದ್ಯಂತ #ಮೀ ಟೂ ಅಭಿಯಾನ ತೀವ್ರ ಸಂಚಲನ ಮೂಡಿಸಿದ್ದು, ದೂರು ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಮಹಿಳೆಯರಿಗೆ ಧೈರ್ಯ ನೀಡಿದ್ದರೂ, ಈ ವರೆಗೂ ಒಂದು ಪ್ರಕರಣ ಕೂಡ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ದೌರ್ಜನ್ಯಕ್ಕೊಳಗಾದ ಮಹಿಳೆಯರು ದೂರು ದಾಖಲಿಸಿದ ಬಳಿಕ ಅವರಿಗೆ ಎಲ್ಲಾ ರೀತಿಯ ಕಾನೂನು ನೆರವು ನೀಡುವುದಾಗಿ ತಿಳಿಸಿದ್ದೆವು. ಆದರೂ ಒಬ್ಬ ಮಹಿಳೆ ಕೂಡ ಮುಂದಕ್ಕೆ ಬಂದು ದೂರು ದಾಖಲಿಸಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರು ಹೇಳಿದ್ದಾರೆ. ಸಂತ್ರಸ್ತ ಮಹಿಳೆಯರು ಮುಂದಕ್ಕೆ ಬಂದು ದೂರು ದಾಖಲಿಸದೇ ಹೋದರೆ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಕಾನೂನು ನೆರವು ಅಗತ್ಯವಿರುವುದು ನಮಗೆ ತಿಳಿಯುವುದಿಲ್ಲ. ದೂರುದಾರರ ಹೇಳಿಕೆಗಳು ಅಗತ್ಯವಿರುವುದರಿಂದ ನಾವು ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment