ಅ೦ತರಾಷ್ಟ್ರೀಯ

ದೊಡ್ಡ ಕಚೇರಿಗಳಲ್ಲಿ ಸಣ್ಣ ಮನುಷ್ಯರು ಪ್ರಧಾನಿ ಮೋದಿ ಕುರಿತು ಹೇಳಿದ್ದಲ್ಲ: ಇಮ್ರಾನ್ ಖಾನ್ ಸ್ಪಷ್ಟನೆ

ಇಸ್ಲಾಮಾಬಾದ್: ‘ದೊಡ್ಡ ಕಚೇರಿಗಳಲ್ಲಿ ಸಣ್ಣ ಮನುಷ್ಯರು’ ತಮ್ಮ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದ್ದು, ತಾವು ಆ ಹೇಳಿಕೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಹೇಳಿದ್ದಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಡುವೆ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವರ ಭೇಟಿಯನ್ನು ಭಾರತ ರದ್ದುಗೊಳಿಸಿದ ಬೆನ್ನಲ್ಲೇ ಇಮ್ರಾನ್ ಖಾನ್ ತಮ್ಮ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದರು. ಈ ವೇಳೆ  ನನ್ನ ಇಡೀ ಜೀವನವೇ ಹೋರಾಟವಾಗಿದ್ದು ದೊಡ್ಡ ದೊಡ್ಡ ಕಚೇರಿಗಳಲ್ಲಿರುವ ಸಣ್ಣ ಮನುಷ್ಯರೊಂದಿಗೆ ಕಳೆಯುವಂತಾಗಿದೆ. ಇವರಿಗೆ ದೂರದೃಷ್ಟಿ ಮತ್ತು ಭವಿಷ್ಯದ ಆಲೋಚನೆಗಳೇ ಇಲ್ಲ ಎಂದು ಕಿಡಿಕಾರಿದ್ದರು. ಇಮ್ರಾನ್ ಖಾನ್ ಅವರ ಈ ಹೇಳಿಕೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಬಿತ್ತರಿಸಿದ್ದವು. ಇದು ವಿವಾದಕ್ಕೂ ಕಾರಣವಾಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಇಮ್ರಾನ್ ಖಾನ್ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದ್ದು, ತಾವು ಆ ಹೇಳಿಕೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಲ್ಲ. ಉಭಯ ರಾಷ್ಚ್ರಗಳ ನಡುವಿನ ಶಾಂತಿ ಸ್ಥಾಪನೆಗೆ ತಮ್ಮಮೊದಲ ಆಧ್ಯತೆ. ಇದನ್ನು ತಪ್ಪಾಗಿ ಅರ್ಥೈಸುವ ಕೆಲಸ ಮಾಡಬೇಡಿ ಎಂದು ಖಾನ್ ಹೇಳಿದ್ದಾರೆ. ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಅತೀ ಹೆಚ್ಚು ಪ್ರಮಾಣದಲ್ಲಿ ಯುದ್ದಗಳನ್ನು ನಡೆಸಿವೆ. ಇದು ಬೇರೆ ರಾಷ್ಟ್ರಗಳಿಂದ ಸಾಧ್ಯವಿಲ್ಲ ಎಂದಲ್ಲ. ಯುದ್ಧಕ್ಕಿಂತ ಶಾಂತಿ ಮುಖ್ಯ. ಯುದ್ಧವೇ ಎಲ್ಲದಕ್ಕೂ ಪರಿಹಾರವಲ್ಲ. ಒಬ್ಬರ ಮೇಲೆ ಒಬ್ಬರು ಕೆಸರೆರಚಿಕೊಳ್ಳುವ ಬದಲು ಶಾಂತಿಸ್ಥಾಪನೆಗೆ ಮಾಡಬಹುದಾದ ಕಾರ್ಯಗಳತ್ತ ದೃಷ್ಟಿ ಹಾರಿಸೋಣ ಎಂದು ಖಾನ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment