ಅ೦ತರಾಷ್ಟ್ರೀಯ

 ದ್ವೀಪಗಳ ನಾಡು ಫಿಜಿಯಲ್ಲಿ ಪ್ರಬಲ ಭೂಕಂಪನ, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲು

ಸಿಡ್ನಿ: ದ್ವೀಪಗಳ ನಾಡು ಫಿಜಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಸುಮಾರು 8.25ರ ಸುಮಾರಿನಲ್ಲಿ ಭೂಕಂಪನ ಸಂಭವಿಸಿದ್ದು, ಫಿಜಿಯ ಲಾಂಬಸಾದಲ್ಲಿ ಈ ಭೂಕಂಪನ ಸಂಭವಿಸಿದೆ. ಲಾಂಬಸಾದ ಸುಮಾರು 533.6 ಕಿ.ಮೀ ಭೂ ತಳದಲ್ಲಿ ಕಂಪನ ಸಂಭವಿಸಿದ್ದು, ಸಂಭಾವ್ಯ ಸುನಾಮಿ ಮತ್ತು ಸಾವು ನೋವಿನ ಕುರಿತು ಅಧಿಕಾರಿಗಳು ಮಾಹಿತಿ ನೀಡಿಲ್ಲ. ಆದರೆ ಲಾಂಬಸಾದ ಕೆಲ ಕಟ್ಟಡಗಳು ಭೂಕಂಪನದಿಂದಾಗಿ ಬಿರುಕು ಬಿಟ್ಟಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸುನಾಮಿ ಎಚ್ಚರಿಕೆ ಇಲ್ಲ: ಇನ್ನು ಪ್ರಬಲ ಭೂಕಂಪನ ಸಂಭವಿಸಿದ್ದರೂ ಸುನಾಮಿ ಸಂಭವ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಗರ್ಭದ ತೀರ ಆಳದಲ್ಲಿ ಅಂದರೆ ಸುಮಾರು 530 ಕೀ.ಮೀ ಆಳದಲ್ಲಿ ಕಂಪನ ಸಂಭವಿಸಿದ್ದು, ಇದರಿಂದ ಸುನಾಮಿ ಅಲೆಗಳು ಏಳುವ ಸಾಧ್ಯತೆ ತೀರಾ ಕಡಿಮೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಭೂಕಂಪನ ಸಂಭವಿಸಿರುವ ಪ್ರದೇಶವನ್ನು ವಿಜ್ಞಾನಿಗಳು ರಿಂಗ್ ಫೈರ್ ಪ್ರದೇಶ ಗುರುತಿಸಿದ್ದು, ಇಲ್ಲಿ ಇಂತಹ ಕಂಪನಗಳು ಸಾಮಾನ್ಯ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment