ರಾಷ್ಟ್ರ

ಧರ್ಮದ ಹೆಸರಿನಲ್ಲಿ ಮನುಕುಲವನ್ನು ಆಕ್ರಮಿಸುವ ಜನರು ಧರ್ಮವನ್ನು ಸ್ವತಃ ಆಕ್ರಮಿಸಿಕೊಳ್ಳುತ್ತಿದ್ದಾರೆ ಮೋದಿ

ನವದೆಹಲಿ:  ನವದೆಹಲಿಯಲ್ಲಿ ನೆಡೆದ ಸಭೆಯೊಂದರಲ್ಲಿ ಮೋದಿ ಮಾತ್ತಾನಾಡಿದ್ದಾರೆ.ಧರ್ಮದ ಹೆಸರಿನಲ್ಲಿ ಮನುಕುಲವನ್ನು ಆಕ್ರಮಿಸುವ ಜನರು ವಾಸ್ತವವಾಗಿ ಧರ್ಮವನ್ನು ನೋಯಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಧರ್ಮದ ಹೆಸರಿನಲ್ಲಿ ಮಾನವಕುಲದ ಮೇಲೆ ದಾಳಿ ಮಾಡುವ ಜನರು ತಮ್ಮ ಆಕ್ರಮಣಗಳ ಅತಿದೊಡ್ಡ ಅವಶ್ಯಕತೆ ಧರ್ಮ ಎಂದು ತಿಳಿದುಕೊಳ್ಳಲು ವಿಫಲವಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.ಯುವಜನತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕಲಿಯುವ ಮಹತ್ವವನ್ನು ಕುರಿತು ಒತ್ತಿ ಹೇಳಿದರು.ನಾವು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಬೇಕೆಂದು ಹೇಳಿದರು.

ಇಸ್ಲಾಮಿಕ್ ಪರಂಪರೆಯ ಬಗ್ಗೆ ಸಮಾವೇಶದಲ್ಲಿ ಮೋದಿ ಅವರು ಮಾತನಾಡಿದರು.”ಅಂಡರ್ಸ್ಟ್ಯಾಂಡಿಂಗ್ ಮತ್ತು ಮಾಡರೇಷನ್” ಅನ್ನು ಪ್ರೋತ್ಸಾಹಿಸಿ ಮತ್ತು ಭಾರತವು ಹಲವು ವರ್ಷಗಳಿಂದ ಹಲವು ಧರ್ಮಗಳನ್ನು ಸ್ವೀಕರಿಸುತ್ತಾ ಬಂದಿದೆ ಎಂದು ಹೇಳಿದರು.ಎಲ್ಲಾ ಧರ್ಮಗಳು ಈ ದೇಶದಲ್ಲಿ ಪ್ರವರ್ಧಮಾನಕ್ಕೆ ಬಂದಂತವು ಎಂದು ಹೇಳಿದರು.

ಬುದ್ಧ ಅಥವಾ ಮಹಾತ್ಮ ಗಾಂಧಿಯವರಾಗಿರಲಿ  ಶಾಂತಿ ಮತ್ತು ಪ್ರೀತಿಯ ತತ್ವಗಳಿಂದ ನಮ್ಮ ಭಾರತದೇಶ ಸಂಸ್ಕೃತಿ ವಿಶ್ವದಾದ್ಯಂತ ವ್ಯಾಪಿಸಿದೆ.ಪ್ರತಿಯೊಂದು ಧರ್ಮವೂ ಭಾರತದಲ್ಲಿ ತನ್ನ ತತ್ವವನ್ನು ಕಂಡುಕೊಂಡಿದೆ ಎಂದು ಹೇಳಿದ್ದಾರೆ.

ಭಾರತೀಯ ಪ್ರಜಾಪ್ರಭುತ್ವ ನಮ್ಮ ಹಳೆಯ ಬಹುದೊಡ್ಡ  ಸಂಸ್ಕೃತಿಯ ಆಚರಣೆಯಾಗಿದೆ ಎಂದು ಹೇಳುತ್ತಾ ದೇಶದಲ್ಲಿ ವೈವಿಧ್ಯತೆಯು ಏಕತೆಯ ಸಂಕೇತವೆಂದು ದೇಶೀಯರು ಎಲ್ಲಾ ಉತ್ಸವಗಳನ್ನು ಆಚರಿಸುತ್ತಾರೆ, ಎಂದು  ನರೇಂದ್ರ ಮೋದಿಯವರು  ಹೇಳಿದ್ದಾರೆ.

 

About the author

ಕನ್ನಡ ಟುಡೆ

Leave a Comment