ರಾಷ್ಟ್ರ ಸಾಂಸ್ಕ್ರತಿಕ

ಧಾರ್ಮಿಕ ಕೇಂದ್ರವಾದ ಕೇದಾರನಾಥ್ ದೇಗುಲದ ಮೇಲೆ ಲೇಸರ್ ಶೋಗೆ ಪರಿಸರವಾದಿಗಳು ತೀವ್ರ ವಿರೋಧ

ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರವಾದ ಕೇದಾರನಾಥ್ ದೇಗುಲದ ಮೇಲೆ ಲೇಸರ್‌ ಶೋಗೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಾಳೆ ದೇಗುಲದ ಮೇಲೆ ಲೇಸರ್‌ ಶೋ ಮೂಲಕ ಶಿವ ಕಾಣುವಂತೆ ಕಾರ್ಯಕ್ರಮವನ್ನು ಭಕ್ತಾದಿಗಳು ನಿಯೋಜಿಸಿದ್ದಾರೆ. ಆದರೆ ಈ ಲೇಸರ್‌ ಶೋ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.ಕೇದಾರ್ಘಾಟಿ ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಇಂತಹ ಸ್ಥಳದಲ್ಲಿ ಲೇಸರ್‌ ಶೋ ಮಾಡುವುದು ಸೂಕ್ತವಲ್ಲ. ಕಾರ್ಯಕ್ರಮದಿಂದ ಗದ್ದಲ ಉಂಟಾಗಲಿದ್ದು  ಅಪಾಯ ಸಂಭವಿಸುವ ಸಂಭವವಿದೆ ಎಂದು ಪತಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 2013ರ ಪ್ರವಾಹದ ಬಳಿಕ ಭೂಮಿ ಸಡಿಲಗೊಂಡಿದ್ದು, ಯಾವುದೇ ಕ್ಷಣದಲ್ಲಿ ವಿಕೋಪಗಳು ಸಂಭವಿಸಬಹುದು ಎಂದು ಭೂಗೋಳ ತಜ್ಞ ಪ್ರೊ. ಬಯಾನಿ ಉತ್ತರಾಖಂಡ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ತಜ್ಞರ ಸಲಹೆ ಪಡೆಯದೆ ರಾಜ್ಯ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಪರಿಸರ ತಜ್ಞರು ಟೀಕಿಸಿದ್ದಾರೆ. ಭಕ್ತಾದಿಗಳು ಮಾತ್ರ ಐತಿಹಾಸಿಕ ದೇವಸ್ಥಾನದ ಮೇಲೆ ಲೇಸರ್‌ ಶೋ ಮೂಲಕ ಪೌರಾಣಿಕ ಶಿವನನ್ನು ಕಾಣಲು ಕಾತುರರಾಗಿದ್ದಾರೆ. ಪತಿಸರವಾದಿಗಳ ವಿರೋಧ ಮಧ್ಯೆಯೂ 7 ದಿನಗಳ ಕಾಲ ಲೇಸರ್‌ ಶೋಗೆ ಸರ್ಕಾರ ಮುಂದಾಗಿದೆ. ಉತ್ತರಾಖಂಡ್‌ ಸರ್ಕಾರ ಭಕ್ತಾದಿಗಳನ್ನು ಮೆಚ್ಚಿಸಲು ನಿರ್ಧಾರ ಕೈಗೊಳ್ಳುವ ಬದಲು ತಜ್ಞರ ಸಲಹೆ ತೆಗೆದುಕೊಳ್ಳಬೇಕಿತ್ತು ಎಂಬ ಕೂಗು ಕೇಳಿ ಬರುತ್ತಿದೆ.

About the author

ಕನ್ನಡ ಟುಡೆ

Leave a Comment