ರಾಜ್ಯ ಸುದ್ದಿ

ನಂಗೆ ತಿಲಕ ಇಟ್ಟವರನ್ನು ಕಂಡರೆ ಭಯ: ಮಾಜಿ ಸಿಎಂ ಸಿದ್ದರಾಮಯ್ಯ

ಬಾಗಲಕೋಟ : ತಿಲಕ ಇಟ್ಟುಕೊಂಡವರನ್ನು ಕಂಡರೆ ನನಗೆ ಭಯ’ ಎನ್ನುವ ಮೂಲಕ ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಬಿಜೆಪಿಯವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಬಾದಾಮಿ ತಾಲೂಕಿನ ಕೆಂದೂರ ಕೆರೆಯ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಹಾಸ್ಯಮಯವಾಗಿ ಈ ಮಾತು ಹೇಳಿದರು. ಕಾಮಗಾರಿ ಕೈಗೊಂಡ ಗುತ್ತಿಗೆದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಉದ್ದ ನಾಮ ಹಾಕಿದವರನ್ನು ಕಂಡರೆ ನನಗೆ ಭಯವಿದೆ, ನೀವು ಯಾವಾಗ ಕಾಮಗಾರಿ ಮುಗಿಸುತ್ತೀರಿ ?. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು. ವಿಶೇಷವೆಂದರೆ ಗುತ್ತಿಗೆದಾರರು ಉದ್ದ ತಿಲಕವಿಟ್ಟುಕೊಂಡಿದ್ದು ಸಿದ್ದರಾಮಯ್ಯ ಹೀಗೆ ಹೇಳಲು ಕಾರಣವಾಯಿತು.

About the author

ಕನ್ನಡ ಟುಡೆ

Leave a Comment