ಸಿನಿ ಸಮಾಚಾರ

ನಕಲಿ ದಾಖಲೆಯನ್ನು ನೀಡಿ ಬ್ಯಾಂಕ್ ಗೆ ವಂಚಿಸಿದ ನಟಿ ಸಿಂಧೂ ಮೆನನ್

ಬೆಂಗಳೂರು: ನಕಲಿ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕ್ ನಿಂದ ಸಾಲ ಪಡೆದು ವಂಚಿಸಿದ ಆರೋಪದಡಿ ನಟಿ ಸಿಂಧೂ ಮೆನನ್ ಮತ್ತು ಸಹೋದರ ಮನೋಜ್ ಸೇರಿದಂತೆ ನಾಲ್ವರ ವಿರುದ್ಧ ಆರ್.ಎಂ.ಸಿ ಯಾರ್ಡ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಆರೋಪಿಗಳು ಕಾರು ಸಾಲ ಪಡೆಯುವ ಸೋಗಿನಲ್ಲಿ ಬ್ಯಾಂಕ್ ಆಫ್ ಬರೋಡಾಗೆ ಸಕಲಿ ದಾಖಲೆಗಳನ್ನು ನೀಡಿ 36.78 ಲಕ್ಷ ರೂ.ಸಾಲ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.

ಸಿಂಧೂ ಮೆನನ್ ಸಹೋದರ ಮನೋಜ್ ಹಾಗೂ ಆತನ ಪ್ರೇಯಸಿ ನಾಗಶ್ರೀಯನ್ನು ಪೊಲೀಸರು ಬಂಧಿಸಿದ್ದು,ತಲೆಮರೆಸಿಕೊಂಡಿರುವ ಸಿಂಧೂ ಮೆನನ್ ಮತ್ತು ಸುಧಾ ರಾಜಶೇಖರ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment