ರಾಷ್ಟ್ರ ಸುದ್ದಿ

ನಕ್ಸಲ್ ಸಂಪರ್ಕ: ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿಚಾರಣೆ ಸಾಧ್ಯತೆ

ಪುಣೆ: ನಿಷೇಧಿತ ಮಾವೋವಾದಿ ಕಮ್ಯುನಿಷ್ಠ್ ಸಂಘಟನೆಯ  ಚಟುವಟಿಕೆಗಳ ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಈಗಾಗಲೇ ಪೊಲೀಸರು ಹಲವು ಕಾರ್ಯಕರ್ತರನ್ನು ಬಂಧಿಸಿದ್ದು,ಬಂಧಿತ ನಕ್ಸಲ್ ಕಾರ್ಯಕರ್ತರಿಂದ ವಶಪಡಿಸಿಕೊಳ್ಳಲಾದ ಪತ್ರಗಳಲ್ಲಿ ದಿಗ್ವಿಜಯ್ ಸಿಂಗ್ ಅವರ ಫೋನ್ ನಂಬರ್ ಪತ್ತೆಯಾಗಿದೆ,

2017 ಸೆಪ್ಟಂಬರ್ 25 ರಂದು ಬರೆದಿದ್ದ ಪತ್ರದಲ್ಲಿ, ವಿದ್ಯಾರ್ಥಿಗಳನ್ನು ದೇಶವ್ಯಾಪಿ ಬಳಸಿ ಪ್ರತಿಭಟನೆ ತೀವ್ರಗೊಳಿಸಲು ನೆರವಾಗಲು ಕಾಂಗ್ರೆಸ್ ಮುಖಂಡರು ಒಪ್ಪಿಕೊಂಡಿದ್ದಾರೆ ಎಂದು ಕಾಮ್ರೆಡ್ ಪ್ರಕಾಶ್ ಎಂಬುವರು ಸುರೇಂದ್ರ ಎಂಬುವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖವಿದೆ, ಕಳೆದ ಜೂನ್ ನಲ್ಲಿ ಕಾಮ್ರೆಡ್ ಸುರೇಂದ್ರ ಎಂಬ ನಾಗಪುರ ಮೂಲದ ವಕೀಲನನ್ನ ಪೊಲೀಸರು ಬಂಧಿಸಿದ್ದರು. ಆತ ಮೊವೋವಾದಿಗಳ ಪ್ರಮುಖ ಕಮಾಂಡರ್ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
ನಕ್ಸಲ್ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ಇತ್ತೀಚೆಗೆ ಕೆಲವು ಮಂದಿಯನ್ನು ಬಂಧಿಸಿದ್ದರು. ಬಂಧಿತ ಟಾಪ್ ನಕ್ಸಲ್ ನಾಯಕತ್ವಕ್ಕೂ ಸಂಬಂಧ ಇರುವುದಕ್ಕೆ ಸಾಕ್ಷಿ ಎಂಬಂತೆ ಪೊಲೀಸರು ನ್ಯಾಯಾಲಯಕ್ಕೆ ಕೊಟ್ಟಿರುವ ದಾಖಲೆಗಳಲ್ಲಿ ಈ ಪತ್ರವೂ ಒಂದಾಗಿದೆ.

About the author

ಕನ್ನಡ ಟುಡೆ

Leave a Comment