ಸುದ್ದಿ

ನಗರದಲ್ಲೂ ಆಗಬಹುದು ಅನಿಲ ದುರಂತ: ಜಜ್‌ ಆತಂಕ

ಬೆಂಗಳೂರು: ನಗರದ ಹೊರವಲಯದ ಭೂಭರ್ತಿ ಘಟಕಗಳಲ್ಲಿ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಸುರಿಯುತ್ತಿರುವ ತ್ಯಾಜ್ಯದ ಸಂಸ್ಕರಣೆಗೆ ವೈಜ್ಞಾನಿಕ ಕ್ರಮ ಕೈಗೊಳ್ಳದೇ ಹೋದರೆ, ಅದು ಹೊರಸೂಸುವ ಮಿಥೇನ್‌ನಿಂದಾಗಿ ಭೋಪಾಲ್‌ ಅನಿಲ ದುರಂತ ಮಾದರಿಯ ಘಟನೆ ನಮ್ಮಲ್ಲೂ ಸಂಭವಿಸಬಹುದು…

ಈ ರೀತಿ ಆತಂಕ ವ್ಯಕ್ತಪಡಿಸಿದವರು ಹೈಕೋರ್ಟ್‌ ವಿಭಾಗೀಯ ಪೀಠದ ಜಜ್‌ ನ್ಯಾ ಬಿ.ವಿ.ನಾಗರತ್ನ ಅವರು. ತ್ಯಾಜ್ಯ ವಿಲೇವಾರಿ ಕುರಿತಂತೆ ಸಲ್ಲಿಕೆಯಾಗಿರುವ ಪಿಐಎಲ್‌ಗಳ ವಿಚಾರಣೆ ನಡೆಸುತ್ತಿರುವ ನ್ಯಾ.ಬಿ.ಎಸ್‌.ಪಾಟೀಲ್‌ ನೇತೃತ್ವದ ವಿಭಾಗೀಯಪೀಠದಲ್ಲಿರುವ ಅವರು ”ನಾವು ಇಲ್ಲಿ(ಬೆಂಗಳೂರಿನಲ್ಲಿ) ಭೋಪಾಲ್‌ ಮಾದರಿ ಅನಿಲ ದುರಂತ ಕಾಣಬೇಕೋ ಅಥವಾ ಇನ್ನೊಂದು ಬೆಳ್ಳಂದೂರು ನೋಡಬೇಕೋ? ಭೋಪಾಲ್‌ನಲ್ಲಿ ಕೈಗಾರಿಕೆಗಳಿಂದಾಗಿ ಅನಿಲ ದುರಂತ ಸಂಭವಿಸಿತ್ತು. ಇಲ್ಲಿ ತ್ಯಾಜ್ಯದಿಂದ ದುರ್ಘಟನೆ ಆಗಬಹುದು. ಬೆಳ್ಳಂದೂರು ಕೆರೆಯಲ್ಲಿ ಹಿಂದೆ ನೀರಿತ್ತು. ಈಗ ವಿಷಾನಿಲವೇ ತುಂಬಿದೆ. ಅಲ್ಲಿಂದ ಒಮ್ಮೆಲೆ ಮಿಥೇನ್‌ ಹೊರಬಿದ್ದರೆ ನೂರಾರು ಒಮ್ಮೆಲೆ ಸಾಯಬಹುದು,” ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment