ಸಿನಿ ಸಮಾಚಾರ

ನಟರಾದ ದರ್ಶನ್​, ಯಶ್​​​ ನಮ್ಮನೆ ಮಕ್ಕಳು, ಏನೇ ಹೇಳಿದರೂ ಮಾಡ್ತಾರೆ: ಸುಮಲತಾ ಅಂಬರೀಷ್

ಮಂಡ್ಯ: ನಟರಾದ ದರ್ಶನ್​​​ ಹಾಗೂ ಯಶ್ ನನ್ನ ಮನೆ ಮಕ್ಕಳು. ನಾನೇನೇ ಕೆಲಸ ಹೇಳಿದರೂ ಅವರು ಯಾವುದೇ ಯೋಚನೆ ಮಾಡದೇ ಮಾಡ್ತಾರೇ ಎಂದು ಸುಮಲತಾ ಅಂಬರೀಷ್ ಅವರು ಗುರುವಾರ ಹೇಳಿದ್ದಾರೆ. ಇಂದು ಮಳವಳ್ಳಿಯಲ್ಲಿ ದರ್ಶನ್ ತಮಗೆ ಬೆಂಬಲ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ದರ್ಶನ್ ಮತ್ತು ಯಶ್ ನಮ್ಮನೆ ಮಕ್ಕಳು. ಅದರಲ್ಲೂ ದರ್ಶನ್​​ ಮಾತ್ರ ನನ್ನ ದೊಡ್ಮಗ ಇದ್ದಂಗೆ, ನಿರೀಕ್ಷೆಗೂ ಮೀರಿ ನನ್ನ ಜೊತೆ ನಿಲ್ತಾನೇ. ಅಭಿಶೇಕ್​​​ಗಿಂತ ಎರಡು ಪಟ್ಟು ನಿರೀಕ್ಷೆ ನನ್ನ ಮೇಲಿಡಿ ಎನ್ನುತ್ತಾನೇ ದರ್ಶನ್​​. ಹೀಗಾಗಿ ಇಬ್ಬರು ಕೂಡ ನನ್ನ ಪರವಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದರು. ನಾನು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಹಿಂದೆ ಯಾವುದೇ ಪಕ್ಷ, ಅಧಿಕಾರ ಇಲ್ಲ. ಜನರ ಬೆಂಬಲ ಜತೆಗೆ ಚುನಾವಣೆಗೆ ಹೋಗುತ್ತಿದ್ದೇನೆ. ಯಾರಿಗೂ ತೊಂದರೆ ನೀಡಬಾರದು ಎಂಬುದು ನನ್ನ ಉದ್ದೇಶ. ಹೀಗಾಗಿ ದರ್ಶನ್​​ ಮತ್ತು ಯಶ್​​ ಸೇರಿದಂತೆ ಯಾರೇ ಆಗಲಿ ಶೂಟಿಂಗ್​​ ಇಲ್ಲದ ಸಮಯ ನೋಡಿ ಪ್ರಚಾರಕ್ಕೆ ಕರೆಸಿಕೊಳ್ಳುತ್ತೇನೆ ಎಂದರು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಸುಮಲತಾ ಪರ ಪ್ರಚಾರ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಅಂಬರೀಶ್ ಅವರು ಚುನಾವಣೆಗೆ ನಿಂತಾಗಲೂ ಪ್ರಚಾರಕ್ಕೆ ಹೋಗಿದ್ದೇನೆ. ಈಗಲೂ ಹೋಗುತ್ತೇನೆ. ಸುಮಲತಾ ಪರ ಪ್ರಚಾರ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment