ಸುದ್ದಿ

ನಟಿ ಊರ್ವಶಿ ರೌತೆಲಾ ಹೆಸರಿನ ನಕಲಿ ಆಧಾರ್‌ ಕಾರ್ಡ್‌ ಬಳಕೆ


ಮುಂಬಯಿ: ಆಧಾರ್‌ ವೈಯಕ್ತಿಕ ಮಾಹಿತಿ ದುರ್ಬಳಕೆ ಆತಂಕದ ನಡುವೆಯೇ, ಬಾಲಿವುಡ್‌ ನಟಿಯೊಬ್ಬರು ಇದೇ ಕಾರಣಕ್ಕೆ ತೊಂದರೆಗೆ ಸಿಲುಕಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಬಾಲಿವುಡ್‌ ನಟಿ ಊರ್ವಶಿ ರೌತೆಲಾ ಹೆಸರಿನ ನಕಲಿ ಆಧಾರ್‌ ಕಾರ್ಡ್‌ ಬಳಸಿ ಮುಂಬಯಿನ ಬಾಂದ್ರದಲ್ಲಿರುವ ಫೈವ್‌ ಸ್ಟಾರ್‌ ಹೋಟೆಲ್‌ನ ಕೊಠಡಿ ಬಾಡಿಗೆ ಪಡೆದಿದ್ದಾನೆ.

ಕಳೆದ ಮಂಗಳವಾರ ನಟಿ ಹೋಟೆಲ್‌ಗೆ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ ಸಂದರ್ಭ ಈ ವಿಷಯ ಬೆಳಕಿಗೆ ಬಂದಿದೆ. ಇದರಿಂದ ಗಲಿಬಿಲಿಗೊಂಡ ನಟಿ ಕಾರ್ಯದರ್ಶಿಯನ್ನು ವಿಚಾರಿಸಿದಾಗ, ತಮ್ಮಿಂದ ಯಾವುದೇ ರೂಮ್‌ ಬುಕ್‌ ಮಾಡದಿರುವುದು ಖಚಿತಪಟ್ಟಿದೆ.

ಕೂಡಲೇ ನಟಿ ಬಾಂದ್ರಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಐಪಿಸಿ 420, 468ರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆಪರಿಚಿತನ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

About the author

ಕನ್ನಡ ಟುಡೆ

Leave a Comment