ರಾಷ್ಟ್ರ

ನಟಿ ಜಯಾಬಚ್ಚನ್ ಅವರು ದೇಶದ ಅತ್ಯಂತ ಶ್ರೀಮಂತ ಸಂಸದೆ

ನವದೆಹಲಿ:ತಾವು ಹೊಂದಿರುವ ಆಸ್ತಿಯ ಮೌಲ್ಯದ 1000 ಕೋಟಿ ರೂ ಎಂದು ಘೋಷಿಸುವುದರ ಮೂಲಕ ಸಮಾಜವಾದಿ ಪಕ್ಷದ ಅಭ್ಯರ್ಥಿ ನಟಿ ಜಯಾಬಚ್ಚನ್ ಅವರು ದೇಶದ ಅತ್ಯಂತ ಶ್ರೀಮಂತ ಸಂಸದೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಜಯಾ ಬಚ್ಚನ್ ಅವರು ತಾವು 1000 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.

2014 ರಲ್ಲಿ ಬಿಜೆಪಿ ಸಂಸದ ರವೀಂದ್ರ ಕಿಶೋರ್ ಅವರನ್ನು ಹಿಂದಿಕ್ಕಿ ನಟಿ ಜಯಾಬಚ್ಚನ್ ಅವರು ದೇಶದ ಅತ್ಯಂತ ಶ್ರೀಮಂತ ಸಂಸದೆ ಎನಿಸಿಕೊಂಡಿದ್ದಾರೆ.

2012 ರಲ್ಲಿ ಜಯಾಬಚ್ಚನ್ ಘೋಷಿಸಿದ್ದ ಆಸ್ತಿ ಮೌಲ್ಯ 492 ಕೋಟಿ ರೂ.ಗಳಾಗಿತ್ತು.ಆದರೆ ಈಗ ಜಯಾ ಬಚ್ಚನ್ ಮತ್ತು ಅವರ ಪತಿ ಅಮಿತಾಬ್ ಬಚ್ಚನ್ ಅವರು 460 ಕೋಟಿ ರೂ ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದು ಹಾಗೆ 540 ಕೋಟಿ ರೂ ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

About the author

ಕನ್ನಡ ಟುಡೆ

Leave a Comment