ರಾಷ್ಟ್ರ

ನಟಿ ಶ್ರೀದೇವಿಗೆ ಸರ್ಕಾರಿ ಗೌರವದ ಅಂತ್ಯ ಸಂಸ್ಕಾರ ಮಾಡಿದ  ಹಿನ್ನೆಲೆ ರಾಜ್ ಠಾಕ್ರೆ ಆರೋಪ

ಮುಂಬೈ: ಖ್ಯಾತ ನಟಿ ಶ್ರೀದೇವಿಯವರು ಕಳೆದ ತಿಂಗಳು ದುಬೈನಲ್ಲಿ ಸಾವನ್ನಪ್ಪಿದ ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಅಂತ್ಯಕ್ರಿಯೆಗೆ ಸರ್ಕಾರಿ ಗೌರವ ಸಲ್ಲಿಸಿದ್ದಕ್ಕೆ  ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರು ಟೀಕೆ ಮಾಡಿದ್ದಾರೆ.

ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಶ್ರೀದೇವಿ ಸಾವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ನೀರವ್ ಮೋದಿ ವಿಷಯ ದೇಶಾದ್ಯಂತ ಚರ್ಚೆಯಾಗುತ್ತಿತ್ತು. ಈ ವೇಳೆ ಪ್ರಕರಣದ ಗಮನವನ್ನು ಬೇರೆಡೆ ಸೆಳೆಯಲು ಶ್ರೀದೇವಿ ಸಾವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು.

ಶ್ರೀದೇವಿ ಸತ್ತ ಮೇಲೆ  ಅವರಿಗೆ ಧ್ವಜ ಹೊದಿಸಿದರು ಶ್ರೀದೇವಿ ಪದ್ಮಶ್ರೀ ಪ್ರಶಸ್ತಿ ತಂದಿದ್ದಕ್ಕೆ ಅವರಿಗೆ ಈ ಗೌರವ ಸಲ್ಲಿಸಲಾಯಿತೇ ಎಂದು ಪ್ರಶ್ನಿಸಿದ್ದಾರೆ.ಇದೆಲ್ಲಾ ಮಹಾರಾಷ್ಟ್ರ ಸರ್ಕಾರದ ತಪ್ಪು ಎಂದು ದೂರಿರುವ ಅವರು ಆಲ್ಕೋಹಾಲ್ ಸೇವಿಸಿ ಬಾತ್ ಟಬ್ ಗೆ ಬಿದ್ದು ಶ್ರೀದೇವಿ ಸತ್ತರು. ‘ಟಾಯ್ಲೆಟ್ ಎಕ್ ಪ್ರೇಮ್ ಕಥಾ’ ಮತ್ತು ‘ಪದ್ಮನ್’ ಮುಂತಾದ ಚಲನಚಿತ್ರಗಳು ಸರಕಾರದ ಯೋಜನೆಗಳ ರಹಸ್ಯ ಪ್ರಚಾರವಾಗಿದೆ ಎಂದು ದೂರಿದ್ದಾರೆ.

 

About the author

ಕನ್ನಡ ಟುಡೆ

Leave a Comment