ರಾಷ್ಟ್ರ ಸುದ್ದಿ

ನಟ ಅಂಬರೀಷ್ ವಿಧಿವಶ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಹೆಚ್. ಅಂಬರೀಷ್ ನಿಧನ ಹೊಂದಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ತೀವ್ರ ಸಂತಾಪ ಸೂಚಿಸಿದ್ದಾರೆ.

PMO India

@PMOIndia

Shri Ambareesh will always be remembered for his memorable performances as an actor and extensive contribution to politics. He was a strong voice for Karnataka’s welfare, at the state and central level. Pained by his demise. Condolences to his family & admirers: PM @narendramodi

2,410 people are talking about this 

ಅಂಬರೀಷ್ ಅವರಾ ರಾಜ್ಯ ಹಾಗೂ ಕೇಂದ್ರದ ಮಟ್ಟದಲ್ಲಿ ಕರ್ನಾಟಕದ ದನಿಯಾಗಿದ್ದರು. ಅವರ ಅಗಲಿಕೆ ಬಹಳಷ್ಟು ನೋವು ತಂದಿದೆ. ಅಂಬರೀಷ್ ಅವರ ಕುಟುಂಬದವರಿಗೆ ಈ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಹೇಳಿದ್ದಾರೆ. ಎದೆನೋವು ಹಾಗೂ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಂಬರೀಷ್ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅಂಬರೀಷ್ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲಿಯೇ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಲಿದೆ.

About the author

ಕನ್ನಡ ಟುಡೆ

Leave a Comment