ಸಿನಿ ಸಮಾಚಾರ

ನಟ ಚೇತನ್‌ನಿಂದ ಹಣ ಕೊಡಿಸುವಂತೆ ಮಂಡಳಿಗೆ ದೂರು

ಬೆಂಗಳೂರು : ಚಿತ್ರನಟ ಚೇತನ್‌ 10 ಲಕ್ಷ ರೂ. ನೀಡಬೇಕಾಗಿದ್ದು , ಆ ಹಣ ಕೊಡಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ಅರ್ಜುನ್‌ ಸರ್ಜಾ ಮ್ಯಾನೇಜರ್‌ ಶಿವಾರ್ಜುನ್‌ ದೂರು ನೀಡಿದ್ದಾರೆ. ಅರ್ಜುನ್‌ ಸರ್ಜಾ ನಿರ್ದೇಶನ ಮಾಡಿದ ಪ್ರೇಮ ಬರಹ ಸಿನಿಮಾದಲ್ಲಿ ನಟಿಸಲು ಮೊದಲು ಚೇತನ್‌ ಆಯ್ಕೆ ಮಾಡಲಾಗಿತ್ತು. ಇದಕ್ಕಾಗಿ ಚೇತನ್‌ 10 ಲಕ್ಷ ರೂ. ಅಡ್ವಾನ್ಸ್‌ ಪಡೆದುಕೊಂಡಿದ್ದರು. ಮುಂಗಡವಾಗಿ ನೀಡಿದ ಹಣವನ್ನು ವಾಪಸ್‌ ಕೊಡುವುದಾಗಿ ಚೇತನ್‌ ಹೇಳಿದ್ದರು. ಆದರೆ ಇದುವರೆಗೂ ಹಣ ಕೊಡದೆ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವಾಣಿಜ್ಯ ಮಂಡಳಿ ಕಾರ್ಯದರ್ಶಿ ಬಾ.ಮಾ.ಹರೀಶ್‌ ತಿಳಿಸಿದ್ದಾರೆ. ನಟಿ ಶ್ರುತಿ ಹರಿಹರನ್‌ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿದಾಗ ನಟ ಚೇತನ್‌, ಶ್ರುತಿ ಬೆಂಬಲಕ್ಕೆ ನಿಂತಿದ್ದಾರೆ. ಈ ಬೆಳವಣಿಗೆ ಬಳಿಕ ಚೇತನ್‌ ಮುಂಗಡವಾಗಿ ಹಣ ಪಡೆದಿರುವುದು ವಾಪಸ್‌ ಕೊಡದಿರುವುದು ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯ ಈಗ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ.

About the author

ಕನ್ನಡ ಟುಡೆ

Leave a Comment