ಸಿನಿ ಸಮಾಚಾರ

ನಟ ಶಿವರಾಜ್ ಕುಮಾರ್ ಮಲ್ಯ ಆಸ್ಪತ್ರೆಗೆ ದಾಖಲು

ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ನಟ ಡಾ. ಶಿವರಾಜ್ ಕುಮಾರ್  ನಗರದ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ ಶಿವಣ್ಣ ಅವರು ನಿನ್ನೆ ಮಧ್ಯರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.  ಕುಟುಂಬಸ್ಥರೆಲ್ಲರು ಶಿವಣ್ಣನ ಜೊತೆಗಿದ್ದಾರೆ ಎಂದು ಹೇಳಲಾಗಿದೆ. ಟಗರು ಯಶಸ್ಸಿನ ನಂತರ ವಿಲ್ಲನ್ ಸಿನಿಮಾ ಶೂಟಿಂಗ್ ನಲ್ಲಿ ಫುಲ್‌ ಬ್ಯುಸಿಯಾಗಿದ್ದು, ಶುಕ್ರವಾರ ದಿ ವಿಲನ್‌ ಸಿನಿಮಾದ ರಿಲೀಸ್ ಆಗುತ್ತಿದೆ,. ಹೀಗಿರುವಾಗಲೇ ಅವರು ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

About the author

ಕನ್ನಡ ಟುಡೆ

Leave a Comment