ರಾಷ್ಟ್ರ ಸುದ್ದಿ

ನನ್ನನ್ನು ನಿಂದಿಸಿ, ಆದರೆ ಸರ್ದಾರ್ ಪಟೆಲ್ ರಂತಹ ವ್ಯಕ್ತಿತ್ವವನ್ನು ಹಗುರವಾಗಿ ಕಾಣಬೇಡಿ: ಕಾಂಗ್ರೆಸ್ ವಿರುದ್ಧ ಮೋದಿ ಕಿಡಿ

ರಾಜ್ ಕೋಟ್: ಗುಜರಾತ್ ನಲ್ಲಿ ಉದ್ಘಾಟನೆಗೆ ಸಜ್ಜುಗೊಂಡಿರುವ ಸರ್ದಾರ್ ಪಟೇಲ್ ಅವರ ಬೃಹತ್ ಪ್ರತಿಮೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ-ಕಾಂಗ್ರೆಸ್ ನಡುವಿನ ವಾಕ್ಸಮರ ಮುಂದುವರೆದಿದ್ದು, “ನಿಮಗೆ ಬೇಕಿದ್ದರೆ ನನ್ನ ವಿರುದ್ಧದ ನಿಂದನೆಯನ್ನು ಮುಂದುವರೆಸಿ ಆದರೆ ಪಟೇಲ್ ರಂತಹ ವ್ಯಕ್ತಿತ್ವಗಳನ್ನು ಹಗುರವಾಗಿ ಕಾಣಬೇಡಿ ಎಂದು ಹೇಳಿದ್ದಾರೆ.

ಮಹಾತ್ಮಾ ಗಾಂಧಿ ಓದಿದ್ದ ಶಾಲೆಯಲ್ಲಿ ಮಹಾತ್ಮಾ ಗಾಂಧಿ ಮ್ಯೂಸಿಯಂ ನ್ನು ಉದ್ಘಾಟಿಸುವುದಕ್ಕೂ ಮುನ್ನ ರಾಜ್ ಕೋಟ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಎರಡನೆ ದಿನವೂ ಸರ್ದಾರ್ ಪಟೇಲರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನನ್ನ ವಿರುದ್ಧದ ನಿಂದನೆಯನ್ನು ಸಹಿಸಿಕೊಳ್ಳುತ್ತೇನೆ ಆದರೆ  ಪಟೆಲ್ ರಂತಹ ವ್ಯಕ್ತಿತ್ವವನ್ನು ಹಗುರವಾಗಿ ಕಾಣಬೇಡಿ ಎಂದು ಕಾಂಗ್ರೆಸ್ ಗೆ ಹೇಳಿದ್ದಾರೆ. ನರ್ಮದಾ ನದಿ ತೀರದಲ್ಲಿ ನಿರ್ಮಾಣವಾಗಿರುವ ಸರ್ದಾರ್ ಪಟೇಲ್ ಅವರ ಬೃಹತ್ ಪ್ರತಿಮೆ (ಸ್ಟ್ಯಾಚು ಆಫ್ ಯುನಿಟಿ) ಯ ಮೇಲೆ ಮೇಡ್ ಇನ್ ಚೀನಾ ಎಂದು ಬರೆಯಲಾಗಿದೆ, ಈ ಮೂಲಕ ಬಿಜೆಪಿ ದೇಶದ ಮೊದಲ ಗೃಹ ಸಚಿವರಿಗೆ, ಭಾರತವನ್ನು ಒಗ್ಗೂಡಿಸಿದವರಿಗೆ ಅವಮಾನ ಮಾಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ 70 ವರ್ಷಗಳ ತನ್ನ ಆಡಳಿತಾವಧಿಯಲ್ಲಿ ಪಟೇಲರಿಗೆ ಗೌರವವನ್ನು ನೀಡಿಯೇ ಇಲ್ಲ. ಈಗ ಅವರ ಪರಂಪರೆಯ ಮೇಲೆ ಹಕ್ಕು ಪ್ರತಿಪಾದನೆಗೆ ಮುಂದಾಗಿದೆ ಎಂದು ಪ್ರತ್ಯಾರೋಪ ಮಾಡಿದ್ದರು.

About the author

ಕನ್ನಡ ಟುಡೆ

Leave a Comment