ರಾಜಕೀಯ

ನನ್ನ ಕಂಡರೆ ಅಮಿತ್ ‌ಶಾಗೆ ಭಯ: ಸಿದ್ದರಾಮಯ್ಯ

ಮೈಸೂರು: ‘ನನ್ನ ಕಂಡರೆ ಅಮಿತ್ ‌ಶಾಗೆ ಭಯ. ಹಾಗಾಗಿ ನಾನೂ ಹೋದಲೆಲ್ಲ ಅಮಿತ್ ಶಾ ಹಿಂಬಾಲಿಸುತ್ತಿದ್ದಾರೆ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ‘ಅವರು ಮಠಕ್ಕಾದರೂ ಹೋಗಲಿ. ಎಲ್ಲಿಗೆ ಬೇಕಾದರೂ ಹೋಗಲಿ.ಅದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆ ಬಗ್ಗೆ ನಾನೂ ಏನನ್ನು ಹೇಳುವುದಿಲ್ಲ,’ ಎಂದರು. ‘ಅಮಿತ್ ಶಾ ನನ್ನನ್ನು ಅಹಿಂದು ಎಂದು ಹೇಳುತ್ತಾರೆ‌. ಅಮಿತ್ ಶಾ ಜೈನ ಧರ್ಮದವರು. ಅವರು ಹಿಂದೂವೇ ಅಥವಾ ಅಹಿಂದುವೇ ಅಂತ ಸ್ಪಷ್ಟಪಡಿಸಲಿ. ‌ಬೈ ಎಲೆಕ್ಷನ್‌ನಲ್ಲಿ ಯಡಿಯೂರಪ್ಪ ಸೇರಿ ಎಲ್ಲರೂ ಬಂದಿದ್ದರು. ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಅಂದಿದ್ದರು. ಆದರೆ ಗೆದ್ದಿದ್ದು ಯಾರು ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

About the author

ಕನ್ನಡ ಟುಡೆ

Leave a Comment