ರಾಜ್ಯ ಸುದ್ದಿ

ನನ್ನ ಗಂಡನ ಮೇಲೆ ಹಲ್ಲೆ ನಡೆಸಿದವರ ಮೇಲೆ ಕೇಸು ದಾಖಲಿಸದೇ ಬಿಡಲಾರೆ: ಆನಂದ್‌ ಸಿಂಗ್‌ ಪತ್ನಿ

ಬೆಂಗಳೂರು: ಆಪರೇಷನ್‌ ಕಮಲ ದ ಭೀತಿಯಿಂದ ರಾಮನಗರದ ರೆಸಾರ್ಟ್‌ ಗೂಡು ಸೇರಿದ್ದ ಕಾಂಗ್ರೆಸ್‌ ಪಾಳಯ ಆಂತರಿಕ ಮಾರಾಮಾರಿಯಿಂದ ಕಕ್ಕಾಬಿಕ್ಕಿಯಾಗಿದೆ. ಭಾನುವಾರ ಬೆಳಗಿನ ಜಾವದತನಕ ಕುಡಿದ ಮತ್ತಿನಲ್ಲಿದ್ದ ಕಂಪ್ಲಿ ಶಾಸಕ ಗಣೇಶ್‌ ಮತ್ತು ವಿಜಯನಗರ ಶಾಸಕ ಆನಂದ್‌ ಸಿಂಗ್‌ ಬಿಜೆಪಿ ಸೇರುವ ವಿಚಾರವಾಗಿ ಬಡಿದಾಡಿಕೊಂಡಿದ್ದಾರೆ. ಆನಂದ್‌ ಸಿಂಗ್‌ ಗಾಯಗೊಂಡು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಾಂಗ್ರೆಸ್‌ ಪಕ್ಷವನ್ನು ಸಾರ್ವಜನಿಕವಾಗಿ ತೀವ್ರ ಮುಜುಗರಕ್ಕೊಳಪಡಿಸಿದೆ.

ಈ ನಡುವೆ ಆನಂದ್‌ ಸಿಂಗ್‌ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕೇಸು ದಾಖಲಿಸದೇ ಬಿಡಲಾರೆ ಎಂದು ಆನಂದ್‌ ಸಿಂಗ್‌ ಪತ್ನಿ ಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ. ಈ ಮಾರಾಮಾರಿಯು ಮೈತ್ರಿ ಸರಕಾರ ಉಳಿಸಿಕೊಳ್ಳುವ ಕಾಂಗ್ರೆಸ್‌ ಸರ್ಕಸ್‌ನ ದಿಕ್ಕನ್ನೇ ಬದಲಿಸಿದ್ದು, ಶಾಸಕರೆಲ್ಲ ಮುಖಂಡರ ನಿಯಂತ್ರಣ ಕಳೆದುಕೊಂಡು ಚೆಲ್ಲಾಪಿಲ್ಲಿಯಾಗಿದ್ದಾರೆ. ಮತ್ತೊಂದೆಡೆ, ಇದರ ರಾಜಕೀಯ ಲಾಭ ಎತ್ತಲು ಬಿಜೆಪಿ ಮುಖಂಡರು ಚುರುಕಾಗಿದ್ದಾರೆ.

ನನ್ನ ಗಂಡನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕೇಸ್‌ ದಾಖಲಿಸದೆ ಬಿಡಲಾರೆ. ಲಕ್ಷ್ಮಿ ಸಿಂಗ್‌, ಆನಂದ್‌ ಸಿಂಗ್‌ ಪತ್ನಿ

 

About the author

ಕನ್ನಡ ಟುಡೆ

Leave a Comment