ಕ್ರೀಡೆ

ನನ್ನ ನಾಯಕತ್ವದ ವೈಫಲ್ಯ; ನನ್ನ ಕ್ಷಮಿಸಿ: ಕಣ್ಣೀರಿಟ್ಟ ಸ್ಮಿತ್

ಹೊಸದಿಲ್ಲಿ:  ಬಾಲ್ ಟ್ಯಾಂಪರಿಂಗ್ ಮೋಸದಾಟದಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಳಿಕ ಇದೇ ಮೊದಲ ಬಾರಿಗೆ ತವರು ದೇಶ ಆಸ್ಟ್ರೇಲಿಯಾಕ್ಕೆ ಹಿಂತಿಗಿರುವ ಸ್ಟೀವ್ ಸ್ಮಿತ್ ನಡೆಸಿರುವ ಪ್ರತಿಕಾಗೋಷ್ಠಿಯಲ್ಲಿ ತೀವ್ರ ಭಾವುಕರಾಗಿ ಕಂಡುಬಂದರು.

ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹಲವು ಬಾರಿ ಬಿಕ್ಕಿ ಬಿಕ್ಕಿ ಅತ್ತ ಸ್ಮಿತ್, ತಾವು ಮಾಡಿರುವ ತಪ್ಪಿಗಾಗಿ ಕ್ಷಮೆಯಾಚಿಸಿದರು. ಅಲ್ಲದೆ ಇದು ತಮ್ಮ ನಾಯಕತ್ವದ ವೈಫಲ್ಯ ಎಂದು ತಪ್ಪನ್ನು ಒಪ್ಪಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಅವರಿನೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಮರಾನ್ ಬೆನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ್ದರು.

About the author

ಕನ್ನಡ ಟುಡೆ

Leave a Comment