ದೇಶ ವಿದೇಶ ಸುದ್ದಿ

ನನ್ನ ನಿಜವಾದ ಗೆಳೆಯ ಮೋದಿ ; ಟ್ರಂಪ್!

ವಾಷಿಂಗ್ಟನ್‌ : ನನ್ನ ನಿಜವಾದ ಮಿತ್ರನೊಂದಿಗೆ ಪ್ರಮುಖ ವಿಚಾರಗಳನ್ನು ಚರ್ಚೆ ಮಾಡುವುದಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿದ್ದಾರೆ.

2 ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿರುವ ಮೋದಿ ಅವರಿಗೆ ವಾಷಿಂಗ್ಟನ್‌ನಲ್ಲಿ ಕೆಂಪು ಹಾಸಿನ ಸ್ವಾಗತ ನೀಡಲಾಯಿತು.

ಇಂದು ಭಾರತೀಯ ಮೂಲದವರ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮೋದಿ , ನಾಳೆ ಟ್ರಂಪ್‌ ಅವರೊಂದಿಗೆ ಹಲವು ವಿಚಾರಗಳ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಬಳಿಕ ಟ್ರಂಪ್‌ ಅವರೊಂದಿಗೆ ಔತಣ ಕೂಟದಲ್ಲಿ ಭಾಗಿಯಾಗಲಿದ್ದಾರೆ.

ಟ್ರಂಪ್‌ ಅಧ್ಯಕ್ಷರಾದ ಬಳಿಕ ಮೋದಿ ಅವರ ಅಮೆರಿಕ ಪ್ರವಾಸ ಹಲವು ಕುತೂಹಲಗಳನ್ನು ಮೂಡಿಸಿದ್ದು, ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ.

ಎಚ್‌1 ಬಿ ವೀಸಾ ಬದಲಾವಣೆ ನಿಯಮಗಳು, ಉಗ್ರವಾದಕ್ಕೆ ಕಡಿವಾಣ ಹಾಕುವುದು ,ನಾಗರಿಕ ಪರಮಾಣು ಒಪ್ಪಂದ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆಯಾಗುವ ಸಾಧ್ಯತೆಗಳಿವೆ

About the author

ಕನ್ನಡ ಟುಡೆ

Leave a Comment