ಸಿನಿ ಸಮಾಚಾರ

ನನ್ನ ಪತ್ನಿ ಅವಾಂತರ ನೋಡಿ ಅಂತ ವಿಡಿಯೋ ಹರಿಬಿಟ್ಟ ಅಗ್ನಿಸಾಕ್ಷಿ ಸಹನಟ ರಾಜೇಶ್ ಧ್ರುವ

ಬೆಂಗಳೂರು: ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಸಹ ನಟ ರಾಜೇಶ್ ಧ್ರುವ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದರೆ ಇದಕ್ಕೆ ಪ್ರತಿಯಾಗಿ ನಟ ನನ್ನ ಪತ್ನಿ ಸರಿಯಿಲ್ಲ. ಕುಡಿದು ಗಲಾಟೆ ಮಾಡುತ್ತಿದ್ದಳು ಅಂತ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ರಾಜೇಶ್ ತಮ್ಮ ಪತ್ನಿ ಶೃತಿ ಮದ್ಯಪಾನ ಮಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶೃತಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡಿದ್ದಾರೆ. ರಾಜೇಶ್ ಹಾಗೂ ಶೃತಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದಾಗ ಈ ವಿಡಿಯೋ ಚಿತ್ರೀಕರಿಸಲಾಗಿದೆ. 2017ರಲ್ಲಿ ಶ್ರುತಿಯವರನ್ನು ವಿವಾಹವಾಗಿದ್ದ ರಾಜೇಶ್ ಅವರಿಗೆ ವರದಕ್ಷಿಣೆ ತರುವಂತೆ ಪೀಡಿಸಿದ್ದಾರೆ. ಅಲ್ಲದೆ ಅವರಿಗೆ ಮಾನಸಿಕ ಹಿಂಸೆ ಕೊಟ್ಟು ಮನೆಯಿಂದ ಹೊರ ಹಾಕಿದ್ದಾರೆ ಅವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ರಾಜೇಶ್ ಪತ್ನಿ ಶ್ರುತಿ ಪತಿ ವಿರುದ್ಧ ಬಸವನಗುಡಿ ಮಹಿಳಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೋಲೀಸರು ತನಿಖೆ ಕೈಗೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment