ರಾಷ್ಟ್ರ ಸುದ್ದಿ

ನನ್ನ ಮನೆ ಮುಂದೆ ಏಲಿಯನ್ ರೀತಿ ವಸ್ತು ಕಂಡೆ, ಎಂದು ಪ್ರಧಾನಿ ಮೋದಿಗೆ ಪತ್ರ ಬರೆದ ಪುಣೆ ವ್ಯಕ್ತಿ

ಪುಣೆ: ತನ್ನ ಮನೆಯ ಕಿಟಕಿಯ ಹೊರಗೆ ಆಗಸದಲ್ಲಿ ಏಲಿಯನ್ ರೀತಿಯ ನಿಗೂಢ ವಸ್ತುವೊಂದು ಕಾಣಿಸಿಕೊಂಡಿತು ಎಂದು ಪುಣೆಯ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಇ-ಮೇಲ್ ಮಾಡಿದ್ದಾರೆ. ಪ್ರಧಾನಿ ಕಾರ್ಯಾಲಯ ಪುಣೆ ವ್ಯಕ್ತಿಯ ಇ-ಮೇಲ್ ಅನ್ನು ಮಹಾರಾಷ್ಟ್ರ ಪೊಲೀಸರಿಗೆ ರವಾನಿಸಿದ್ದು, ಕೂಡಲೇ ತನಿಖೆಗಿಳಿದ ಪೊಲೀಸರು, ಪ್ರಧಾನಿ ಕಾರ್ಯಾಲಯಕ್ಕೆ ಇ-ಮೇಲ್‌ ಮಾಡಿದ 47ರ ವರ್ಷದ ವ್ಯಕ್ತಿ ಕೊಥ್ರೂಡ್‌ ಪ್ರದೇಶದ ನಿವಾಸಿ ಎಂಬುದು ಪತ್ತೆ ಹಚ್ಚಿದ್ದಾರೆ. ಆದರೆ ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿದು ಬಂದಿದೆ. ಆತನು ತನ್ನ ಮನೆಯ ಕಿಟಕಿಯ ಆಗಸದಲ್ಲಿ ಅನ್ಯಗ್ರಹ ವಸ್ತುವನ್ನು ಕಂಡದ್ದು ಕೇವಲ ಭ್ರಾಂತಿ ಎಂಬುದನ್ನು ಪೊಲೀಸರು ಅನಂತರ ಅರಿತುಕೊಂಡಿದ್ದಾರೆ. ಏಲಿಯನ್ ರೀತಿಯ ವಸ್ತುವನ್ನು ಆಗಸದಲ್ಲಿ ಕಂಡೆನೆಂದು ಹೇಳಿಕೊಂಡಿದ್ದ ವ್ಯಕ್ತಿಗೆ ಕೆಲ ವರ್ಷಗಳ ಹಿಂದೆ ಮೆದುಳಾಘಾತವಾಗಿತ್ತು. ಪರಿಣಾಮವಾಗಿ ಮಾನಸಿಕ ಸಂತುಲನೆಯನ್ನು ಕಳೆದುಕೊಂಡಿದ್ದ. ಕೆಲ ತಿಂಗಳ ಹಿಂದೆ ತನ್ನ ಮನೆಯ ಹೊರಗಿನ ಮರಗಳೆಡೆಯಿಂದ ಬೆಳಕು ಹರಿದು ಬರುತ್ತಿದ್ದುದನ್ನು ಕಂಡ ಈ ವ್ಯಕ್ತಿ ಅದನ್ನೇ ಅನ್ಯಗ್ರಹ ವಸ್ತುವೆಂದು ಭ್ರಮಿಸಿದ್ದ. ಈ ಅನ್ಯ ಗ್ರಹ ವಸ್ತುವು ಭೂಗ್ರಹದ ಬಹುಮುಖ್ಯ ಮಾಹಿತಿಗಳನ್ನು ತನ್ನ ಗ್ರಹಕ್ಕೆ ರವಾನಿಸುತ್ತಿದೆ ಎಂಬ ಭೀತಿ ಆತನನ್ನು ಕಾಡತೊಡಗಿತ್ತು.
ಈ ಭೀತಿಯಲ್ಲಿ ಆತ ಪ್ರಧಾನಿ ಕಾರ್ಯಾಲಯಕ್ಕೆ ಇಮೇಲ್‌ ಕಳಿಸಿದ್ದ ಸಂಗತಿ ಆತನ ಮನೆಯವರಿಗೂ ಗೊತ್ತಿರಲಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment