ರಾಜಕೀಯ

ನನ್ನ ವಿರುದ್ದ ಕಾಂಗ್ರೆಸಿಗನ ಷಡ್ಯಂತ್ರ: ಜಾರಕಿಹೊಳಿ ಆರೋಪ

ಬೆಂಗಳೂರು: ನನ್ನ ನೇತೃತ್ವದಲ್ಲಿ ಕ್ಷಿಪ್ರಕ್ರಾಂತಿ ನಡೆಯಲಿದೆ ಎಂಬ ಸುದ್ದಿ ಬೆನ್ನ ಹಿಂದೆ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರೊಬ್ಬರಿದ್ದು, ನನ್ನ ಘನತೆಗೆ ಚ್ಯುತಿ ತರಲು ಈ ನಾಯಕರು ಷಡ್ಯಂತ್ರ ರೂಪಿಸಿದ್ದಾರೆಂದು ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಶುಕ್ರವಾರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ನನ್ನ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಆಗುತ್ತಿದೆ. ನನ್ನೊಂದಿಗೆ ಯಾವ ಕಾಂಗ್ರೆಸ್ ಶಾಸಕರೂ ಸಂಪರ್ಕದಲ್ಲಿಲ್ಲ. ನಾನು ಮುಂಬೈ, ಮಹಾರಾಷ್ಟ್ರಕ್ಕೆ ಹೋಗುತ್ತಿದ್ದೇನೆ ಎಂಬುದೆಲ್ಲಾ ಶುದ್ಧ ಸುಳ್ಳು. ನಾನು ಬೆಂಗಳೂರಿನಲ್ಲಿಯೇ ಇದ್ದೇನೆಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದಲ್ಲಿ ಅಸಮಾಧಾನ ಇದ್ದದ್ದು ಸತ್ಯ. ಆದರೆ, ರಾಹುಲ್ ಗಾಂಧಿ ಹಾಗೂ ನಮ್ಮ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಎಲ್ಲವೂ ಬಗೆಹರಿಸಿದ ಬಳವೂ ಪಕ್ಷ ಬಿಡುವ ಅನಿವಾರ್ಯತೆ ನನಗೆ ಇಲ್ಲ. ಆದರೆ ನನ್ನ ಘನತೆಗೆ ಚ್ಯುತಿ ತರಲು ನಮ್ಮ ಕಾಂಗ್ರೆಸ್ ಪಕ್ಷದವರೇ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಪಕ್ಷದ ಪ್ರಭಾವಿ ನಾಯಕರೊಬ್ಬರು ಈ ಷಡ್ಯಂತ್ರದ ಹಿಂದೆ ಇದ್ದಾರೆಂದು ಆರೋಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment