ಸಾಂಸ್ಕ್ರತಿಕ

ನಬಕಲೇಬರ್ ಉತ್ಸವ .

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 1000 ರೂಪಾಯಿ ಮತ್ತು 10 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ನಬಕಲೇಬರ್ ಉತ್ಸವದ ಅಂಗವಾಗಿ ಹಾಗೂ ಇದರ ಸ್ಮರಣಾರ್ಥವಾಗಿ ಬಿಡುಗಡೆ ಮಾಡಿದರು ಒಡಿಶಾದ ಪುರಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಗಳು ಈ ನಾಣ್ಯ ಬಿಡುಗಡೆ ಮಾಡಿದರು. ಪುರಿಯ ಜಗನ್ನಾಥಸ್ವಾಮಿ, ಬಾಲಭದ್ರ ಮತ್ತು ದೇವಿ ಸುಭದ್ರ ಉತ್ಸವದ ನೆನಪಿನ ಅಂಗವಾಗಿ ಈ ವಿಶಿಷ್ಟ ನಾಣ್ಯಗಳನ್ನು ಬಿಡುಗಡೆ ಮಾಡಲಾಯಿತು.

*ನಬಕಲೇಬರ ಉತ್ಸವದ ಕುರಿತು 

ನಬಕಲೇಬರ ಉತ್ಸವವು ಪುರಿಯ ಪ್ರಾಚೀನ ಸಂಪ್ರದಾಯಗಳಲ್ಲೊಂದಾಗಿದ್ದು, ಒಡಿಶಾದ ಪುರಿ ಜಗನ್ನಾಥಸ್ವಾಮಿ ದೇವಾಲಯದಲ್ಲಿ ನಡೆಯುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಪೂರ್ವನಿರ್ಧರಿತ ದಿನಾಂಕದಂದು ಈ ಉತ್ಸವ ನಡೆದುಕೊಂಡು ಬಂದಿದೆ. ನಬ (ನವ) ಎಂದರೆ ಹೊಸ ಎಂಬ ಅರ್ಥ ಹಾಗೂ ಕಲೇಬರ ಎಂದರೆ ದೇಹ ಎಂಬ ಅರ್ಥ. ಈ ಉತ್ಸವದಲ್ಲಿ ಸ್ವಾಮಿ ಜಗನ್ನಾಥ, ಬಾಲಭದ್ರಾ, ಸುಭದ್ರಾ ಮತ್ತು ಸುದರ್ಶನ ಮೂರ್ತಿಯ ಪ್ರತಿಮೆಗಳನ್ನು ಹೊಸ ಪ್ರತಿಮೆಗಳಾಗಿ ಬದಲಿಸಲಾಗುತ್ತದೆ. ನಬಕಲೇಬರ ಉತ್ಸವದಲ್ಲಿ ಸ್ವಾಮಿ ಜಗನ್ನಾಥ ಹೊಸ ದೇಹವನ್ನು ಧರಿಸುತ್ತಾನೆ ಎಂಬ ಪ್ರತೀತಿ. ಇದು ಸಾಮಾನ್ಯವಾಗಿ ಹನ್ನೆರಡರಿಂದ ಹತ್ತೊಂಬತ್ತು ವರ್ಷಗಳಿಗೊಮ್ಮೆ ಬರುತ್ತದೆ.

 

About the author

Pradeep Kumar T R

Leave a Comment