ರಾಷ್ಟ್ರ ಸುದ್ದಿ

ನಮಗೂ ಶಾಂತಿ ಬೇಕು, ಆದರೆ ದೇಶದ ಭದ್ರತೆಗೆ ಧಕ್ಕೆಯಾದರೆ ಮತ್ತೆ ದಾಳಿ: ಭಾರತೀಯ ಸೇನೆ ಖಡಕ್ ವಾರ್ನಿಂಗ್

ನವದೆಹಲಿ: ಭಾರತ ದೇಶ ಶಾಂತಿ ಪ್ರಿಯ ದೇಶ. ಗಡಿಯಲ್ಲಿ ಶಾಂತಿ ಸ್ಥಾಪನೆಯೇ ದೇಶದ ಸೇನೆಯ ಉದ್ದೇಶ. ಆದರೆ ದೇಶದ ಆಂತರಿಕ ಭದ್ರತೆಗೆ ಧಕ್ಕೆಯಾದರೆ ಖಂಡಿತಾ ಮತ್ತೆ ಉಗ್ರರ ಮೇಲೆ ದಾಳಿ ಮಾಡುತ್ತೇವೆ ಎಂದು ಭಾರತೀಯ ಸೇನೆ ಖಡಕ್ ಎಚ್ಚರಿಕೆ ನೀಡಿದೆ. ದೆಹಲಿಯಲ್ಲಿ ಇಂದು ಸಂಜೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾರತೀಯ ಸೇನೆಯ ಮೇಜರ್ ಜನರಲ್ ಸುರೇಂದ್ರ ಸಿಂಗ್ ಮಹಲ್ ಅವರು, ಎಲ್ಲಿಯ ವರೆಗೂ ಪಾಕಿಸ್ತಾನ ಉಗ್ರರಿಗೆ ನೆರವು ನೀಡುತ್ತಿರುತ್ತಿರುತ್ತದೆಯೋ ಅಲ್ಲಿಯವರೆಗೂ ಭಾರತೀಯ ಸೇನೆ ದಾಳಿ ಮಾಡುತ್ತಿರುತ್ತದೆ. ಭಾರತ ಶಾಂತಿ ಪ್ರಿಯ ದೇಶ. ಗಡಿಯಲ್ಲಿ ಶಾಂತಿ ಸ್ಥಾಪನೆಯೇ ಸೇನೆಯ ಧ್ಯೇಯ ಕೂಡ ಆಗಿದೆ. ದೇಶದ ಆಂತರಿಕ ಭದ್ರತೆಗೆ ಧಕ್ಕೆಯಾದಾಗ ಖಂಡಿತ ಸೇನೆ ಸಿಡಿದು ನಿಲ್ಲುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಗ್ರರ ಮೇಲಿನ ದಾಳಿ ನಿಲ್ಲಿಸುವುದಿಲ್ಲ : ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ನಮ್ಮ ಸೇನೆ ಬದ್ಧವಾಗಿದೆ. ನಮ್ಮ ಹೋರಾಟ ಉಗ್ರರ ವಿರುದ್ಧವಷ್ಟೇ, ಪಾಕ್​ ವಿರುದ್ಧವಲ್ಲ. ಆದರೆ, ಇಲ್ಲಿಯವರೆಗೂ ಪಾಕಿಸ್ತಾನ ಉಗ್ರರರಿಗೆ ಸುರಕ್ಷತೆ ನೀಡುತ್ತಿರುವುದನ್ನು ಬಿಟ್ಟುಕೊಡುತ್ತಿಲ್ಲ. ಹಾಗಂತ ನಾವು ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವುದಿಲ್ಲ. ಬದಲಾಗಿ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಿರುಗೇಟು ನೀಡಲು ನಾವು ಸಿದ್ಧರಿದ್ದೇವೆ: ನೌಕಾಪಡೆಯ ರೀರ್​ ಅಡ್ಮಿರಲ್​ ಡಿ.ಎಸ್.ಗುಜ್ರಾಲ್​ ಅವರು ಮಾತನಾಡಿ, ಪಾಕಿಸ್ತಾನ ನಡೆಸುವ ಯಾವುದೇ ಕುತಂತ್ರಕ್ಕೂ ತಿರಗೇಟು ನೀಡಲು ನಾವು ಸಿದ್ಧರಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳಲು ನಾವು ತಯಾರಿದ್ದೇವೆ. ನಮ್ಮ ನಾಗರಿಕರ ಸುರಕ್ಷತೆ ಹಾಗೂ ಭದ್ರತೆಯನ್ನು ನಾವು ಖಚಿತಪಡಿಸಬೇಕಿದೆ ಎಂದು ಪಾಕ್​ ವಿರುದ್ಧ ತಮ್ಮ ನಿಲುವನ್ನು ವ್ಯಕ್ತಪಡಿಸಿದರು. ಇದೇ ವೇಳೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್​ನ ಬಾಳಾಕೋಟ್ ನಲ್ಲಿರುವ ಜೈಶ್​ ಎ ಮಹಮ್ಮದ್​ ಉಗ್ರ ಸಂಘಟನೆಯ ಉಗ್ರರ ಅಡಗುತಾಣಗಳನ್ನು ಹೊಡೆದುರುಳಿಸಿ ಯಶಸ್ವಿ ವೈಮಾನಿಕ ಕಾರ್ಯಾಚರಣೆ ನಡೆಸಿದ್ದರ ಸಾಕ್ಷಿ ಬಿಡುಗಡೆಯನ್ನು ರಾಜಕೀಯ ನಾಯಕರು ನಿರ್ಧರಿಸುತ್ತಾರೆ ಎಂದು ವಾಯುಪಡೆಯ ಮುಖ್ಯಸ್ಥರು ತಿಳಿಸಿದರು.

About the author

ಕನ್ನಡ ಟುಡೆ

Leave a Comment