ರಾಜಕೀಯ

ನಮ್ಮನ್ನ 10 ಪರ್ಸೆಂಟ್ ಸರ್ಕಾರವೆಂದು ಪ್ರಧಾನಿ ಹುದ್ದೆಗೆ ಮೋದಿ ಅವಮಾನ ಮಾಡಿದ್ದಾರೆ: ಸಿದ್ಧರಾಮಯ್ಯ

ಬೆಂಗಳೂರು: ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುತ್ತಾರೆ. ಅವರು ಗಾಂಭೀರ್ಯವಾಗಿ ಮಾತಾಡ್ತಾರೆ ಅಂದುಕೊಂಡ್ರೆ ಅವರಲ್ಲಿ ಗಾಂಭೀರ್ಯತೆನೇ ಇಲ್ಲ. ನಾನು ಹಲವು ಭಾಗ್ಯಗಳನ್ನ ಕೊಟ್ಟಿದ್ದೇನೆ. ಆದ್ರೆ ಯಡಿಯೂರಪ್ಪ ಕೇವಲ ಸೀರೆ ಸೈಕಲ್ ಕೊಟ್ಟು, ತಿರುಗಾ ಮುರಗಾ ಅದನ್ನೇ ಹೇಳ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಜೈಲಿಗೆ ಹೋಗಿರುವವರನ್ನ ಪಕ್ಕದಲ್ಲಿಟ್ಟುಕೊಂಡು ನಮ್ಮ ಬಗ್ಗೆ ಮಾತನಾಡುವ ಮೋದಿ ನಮ್ಮ ಸರ್ಕಾರ ೧೦ ಪರ್ಸೆಂಟ್ ಕಮೀಷನ್ ಸರ್ಕಾರ ಅಂತಾ ಬೇಜವಾಬ್ದಾರಿ ಹೇಳಿಕೆ ಕೊಡ್ತಾರಲ್ಲ ಇದು ಸರಿನಾ ಅಂತಾ ಜನರಿಗೆ ಪ್ರಶ್ನೆ ಹಾಕಿದರು.

ಬಿಜೆಪಿಯವರು ಎಷ್ಟೇ ನಾಟಕ ಆಡಿದ್ರೂ ಜನರು ನಂಬಲ್ಲ. ಬೆಂಗಳೂರು ರಕ್ಷಿಸಿ ಎಂದು ಬಿಜೆಪಿ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ಬೆಂಗಳೂರು ಉಳಿಸಿದ್ರೆ ಸಾಕಾಗಿದೆ ಎಂದು ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅವಧಿಯಲ್ಲಿ ಗಾರ್ಡನ್ ಸಿಟಿ ಇದ್ದದ್ದು ಗಾರ್ಬೆಜ್ ಸಿಟಿಯಾಗಿತ್ತು. ರಾತ್ರಿಯಲ್ಲಿ ಗುತ್ತಿಗೆ ಕರೆದಿದ್ದರು. ಅಶೋಕ್ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದರು. ಬಿಬಿಎಂಪಿ ಕಟ್ಟಡಗಳನ್ನ ಅಡ ಇಟ್ಟು ಹೋಗಿದ್ರು. ಅಡ ಇಟ್ಟ ಕಟ್ಟಡಗಳನ್ನ ನಾವು ಬಿಡಿಸಿಕೊಂಡಿದ್ದೇವೆ. ಬಿಜೆಪಿಯವರು ಲೂಟಿ ಹೊಡೆದು ಹೋಗಿದ್ದಾರೆ. ಮಾನಗೆಟ್ಟವರು ಎಂದು ಟೀಕಿಸಿದ್ದಾರೆ. ಪ್ರಧಾನಿ ಇಲ್ಲಿಗೆ ಬಂದಂತಹ ಸಂದರ್ಭದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ. ನಮ್ಮ ಸರ್ಕಾರವನ್ನ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪ ಮಾಡುತ್ತಾರೆ. ಚೆಕ್ ಮುಖಾಂತರ ಲಂಚ ತೆಗದುಕೊಂಡು ಯಡಿಯೂರಪ್ಪ ಜೈಲಿಗೆ ಹೋಗಿದ್ರು. ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ನಮ್ಮ ಮೇಲೆ ಆರೋಪ ಮಾಡುತ್ತಾರೆ. ಪ್ರಧಾನಿ ಮಾನಗೆಟ್ಟ ಹೇಳಿಕೆ ನೀಡಿದ್ದಾರೆ
ಪ್ರಧಾನಿ ಹುದ್ದೆಗೆ ಮೋದಿ ಅಗೌರವ ತಂದಿದ್ದಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

About the author

ಕನ್ನಡ ಟುಡೆ

Leave a Comment