ರಾಜಕೀಯ

ನಮ್ಮ ತಿಲಕ ನೋಡಿ ನಿಮಗೆ ಭಯ ಆಗಲೇ ಬೇಕು: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಶೋಭಾ ಕರಂದ್ಲಾಜೆ

ಬೆಂಗಳೂರು: ಹಣೆಗೆ ನಾಮ ಮತ್ತು ತಿಲಕವನ್ನಿಟ್ಟುಕೊಂಡವರನ್ನು ಕಂಡರೆ ನನಗೆ ಭಯವಾಗುತ್ತದೆ ಎಂದು ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇದೀಗ ಬಿಜೆಪಿ ನಾಯಕರು ಸೆಲ್ಫಿ ವಿತ್ ತಿಲಕ್ ಎಂಬ ಹ್ಯಾಶ್ ಟ್ಯಾಗ್ ನಡಿ ಟ್ವಿಟ್ಟರ್ ಅಭಿಯಾನ ಆರಂಭಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರನ್ನು ಕುಟುಕಿದ್ದಾರೆ. ನಮ್ಮ ತಿಲಕ ನೋಡಿ ನಿಮಗೆ ಭಯ ಆಗಲೇ ಬೇಕು, ಯಾಕಂದ್ರೆ ನಿಮಗೆ ವೋಟು ಹಾಕಿದ ಜನರೂ ತಿಲಕ ಹಾಕೊರು. ನಿಮ್ಮನ್ನು ಮೈಸೂರಿನಲ್ಲಿ ಸೋಲಿಸಿದ ಜನರು ತಿಲಕ ಹಾಕುವವರೇ, ಸಜ್ಜನರನ್ನು ಕಂಡಾಗ ದುರಹಂಕಾರಿಗಳಿಗೆ, ಟಿಪ್ಪು ಪ್ರಿಯರಿಗೆ ಭಯ ಆಗೋದು ಸಹಜ. ತಿಲಕ ಹಿಂದೂ ಧರ್ಮದ ಒಂದು ಅವಿಭಾಜ್ಯ ಅಂಗ, ಅದು ನಮ್ಮ ಹೆಮ್ಮೆ ಕೂಡ ಎಂದಿದ್ದಾರೆ. ಇನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಹಣೆಯಲ್ಲಿ ತಿಲಕವನ್ನಿಟ್ಟುಕೊಂಡ ಹಿಂದುಗಳನ್ನು ಕಂಡರೆ ಗಾಬರಿಯಾಗುವ ಸಿದ್ದಣ್ಣ ಎಂದು ವ್ಯಂಗ್ಯವಾಡಿದ್ದಾರೆ.

About the author

ಕನ್ನಡ ಟುಡೆ

Leave a Comment