ರಾಷ್ಟ್ರ

ನಮ್ಮ ಪಕ್ಷದ ’ಕೈ’ಗೆ ಮುಸ್ಲಿಮರ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿ

ಅಲೀಘರ್: ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಮ್ಮ ಪಕ್ಷದ ಕೈಗೆ ಮುಸ್ಲಿಮರ ರಕ್ತದ ಕಲೆ ಮೆತ್ತಿಕೊಂಡಿದೆ ಎಂದಿದ್ದಾರೆ.  ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಸಲ್ಮಾನ್ ಖುರ್ಷಿದ್ ಈ ಹೇಳಿಕೆ ನೀಡಿದ್ದಾರೆ.

ಸಂವಾದದಲ್ಲಿ ಅಮಿರ್ ಮಿಂಟೋಯಿ ಎಂಬ ವಿದ್ಯಾರ್ಥಿ ಕಾಂಗ್ರೆಸ್ ಪಕ್ಷದ ಅವಧಿಯಲ್ಲೇ ಹೆಚ್ಚು ಕೋಮು ಗಲಭೆಗಳು ಸಂಭವಿಸಿರುವುದು ಎಂಬ ವಿಷಯವನ್ನು ಪ್ರಸ್ತಾಪಿಸಿದರು ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸಲ್ಮಾನ್ ಖುರ್ಷಿದ್ ಕಾಂಗ್ರೆಸ್ ಪಕ್ಷದ ಕೈಯಲ್ಲಿ ಮುಸ್ಲಿಮರ ರಕ್ತದ ಕಲೆ ಇದೆ ಆ ಪಕ್ಷದ ನಾಯಕನಾಗಿ ನನಗೆ ನನ್ನ ಕೈಯಲ್ಲಿಯೂ ಆ ಕಲೆಗಳಿವೆ ಎನಿಸುತ್ತದೆ ಎಂದಿದ್ದಾರೆ. 

About the author

ಕನ್ನಡ ಟುಡೆ

Leave a Comment