ರಾಜ್ಯ ಸುದ್ದಿ

ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು, ಆತಂಕ ಸೃಷ್ಟಿ, ಎಲ್ಲಿ ಬರುತ್ತೆ ಆ ಪಿಲ್ಲರ್

ಬೆಂಗಳೂರು: ನಮ್ಮ ಮೆಟ್ರೋ ಆರಂಭವಾಗಿ 8 ವರ್ಷಕ್ಕೆ ಪಿಲ್ಲರ್ ವೊಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.
ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿಯ 155ನೇ ಪಿಲ್ಲರ್ ನಲ್ಲಿ ಬಿರುಕು ಬಿಟ್ಟಿದೆ. ಅಲ್ಲದೆ ಪಿಲ್ಲರ್ ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರುಗಿದೆ. ಈ ಹಿನ್ನೆಲೆಯಲ್ಲಿ ಒಂದು ಬದಿಯ ಸಂಚಾರವನ್ನು ತಡೆದು ವಾಹನಗಳಿಗೆ ಏಕಮುಖದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಪಿಲ್ಲರ್ ಬಳಿ ಜೇನು ಗೂಡು ಕಟ್ಟಿತ್ತು. ಹೀಗಾಗಿ ಅದನ್ನು ತೆರವುಗೊಳಿಸಲು ಬಂದಿದ್ದು ಈ ವೇಳೆ ಹಾನಿ ಕಂಡುಬಂದಿದೆ. ಅಲ್ಲಿ ಕಬ್ಬಿಣದ ಸ್ಲೈಡರ್ ಹಾಕಿರುವುದಾಗಿ ಮೆಟ್ರೋ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಪ್ರತಿನಿತ್ಯ ಸಾವಿರಾರು ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಅಲ್ಲದೆ ಪಿಲ್ಲರ್ ಕೆಳಗೆಡಯೂ ಸಾವಿರಾರು ವಾಹನಗಳು ದಿನನಿತ್ಯ ಸಂಚರಿಸುತ್ತದೆ. ಹೀಗಾಗಿ ಆಂತಕ ಉಂಟಾಗಿದ್ದು ಯಾವುದೇ ರೀತಿಯ ಹಾನಿಯಾಗದಂತೆ ಮುಂಜಾಗೃತಾ ಕ್ರಮ ಕೈಗೊಂಡಿರುವುದಾಗಿ ಬಿಎಂಆರ್ಸಿಎಲ್ ತಿಳಿಸಿದೆ.

About the author

ಕನ್ನಡ ಟುಡೆ

Leave a Comment