ರಾಷ್ಟ್ರ ಸುದ್ದಿ

ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು, ರಿಪೇರಿಗಾಗಿ ಶನಿವಾರ, ಭಾನುವಾರ ಸಂಚಾರ ಸ್ಥಗಿತ

ಬೆಂಗಳೂರು: ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್ ವೊಂದರಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ದುರಸ್ಥಿ ನಡೆಸಿ ಪಿಲ್ಲರ್ ನ ಎರಡು ಕಡೆ ಸಪೋರ್ಟಿಂಗ್ ಸ್ಟ್ರಕ್ಚರ್ ಅಳವಡಿಸಲಾಗಿದೆ. ಇನ್ನು ಹೆಚ್ಚುವರಿ ರಿಪೇರಿಗಾಗಿ ನಾಳೆ ಮತ್ತು ನಾಳಿದ್ದು ಎರಡು ದಿನ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಎಂಜಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿ ತನಕದ ನೇರಳೆ ಬಣ್ಣದ ಲೈನ್ ನಲ್ಲಿ ಮೆಟ್ರೋ ಸಂಚಾರ ಸ್ಧಗಿತಗೊಳ್ಳುವ ಸಾಧ್ಯತೆ ಇದೆ. ಈ ಕುರಿತಂತೆ ಮಾತನಾಡಿರುವ ಬಿಎಂಆರ್ಸಿಎಲ್ ನಿರ್ದೇಶಕ ಅಜಯ್ ಸೇಠ್ ಅವರು ರಿಪೇರಿ ಕೆಲಸಕ್ಕಾಗಿ 30 ರಿಂದ 36 ಗಂಟೆಗಳ ಕಾಲ ನಡೆಸಲಾಗುವುದರಿಂದ ಎರಡು ದಿನ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ ಎಂದರು.

ಇದೇ ವೇಳೆ ಮಾತನಾಡಿದ ಬಿಎಂಆರ್ಎಸಿಎಲ್ ಸಾರ್ವಜನಿಕ ಸಂಪರ್ಕಧಿಕಾರಿ ಚಾವನ್, ಇದೇ ಮೊದಲ ಬಾರಿಗೆ ಇಂತಹ ಸಮಸ್ಯೆ ಎದುರಾಗಿದೆ. ದುರಸ್ಥಿ ಕಾರ್ಯಕ್ಕಾಗಿ ದೆಹಲಿ ಮೆಟ್ರೋ ವಿಭಾಗದಿಂದ ಎಂಜಿನಿಯರ್ಗಳು, ತಜ್ಞರು ಆಗಮಿಸಿದ್ದು ವಾರಾಂತ್ಯ ದಿನದಲ್ಲಿ ಮೆಟ್ರೋ ಸಂಚಾರವನ್ನು ಸಂಪೂರ್ಣ ನಿಲ್ಲಿಸುವಂತೆ ಎಂಜಿನಿಯರ್ ಗಳು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಬಿರುಕು ಸರಿಪಡಿಸಲು ಕನಿಷ್ಠ 10 ದಿನ ಬೇಕೇ ಬೇಕು. ಲಾಭದ ಬಗ್ಗೆ ತಲೆಕೆಡಿಸಿಕೊಂಡರೆ, ದುರಸ್ತಿ ಕಾರ್ಯ ಪರಿಣಾಮಕಾರಿಯಾಗಿ ನಡೆಯುವುದಿಲ್ಲ. ತಾತ್ಕಾಲಿಕ ರಿಪೇರಿನೂ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ. ಹಾಗಾಗಿ ಕನಿಷ್ಟ ಎರಡು ದಿನವಾದರೂ ಮೆಟ್ರೋ ಸಂಚಾರ ಸ್ಥಗಿತವಾಗಲೇಬೇಕು ಎಂದು ಎಂಜಿನಿಯರ್ ಗಳು ಸಲಹೆ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment