ದೇಶ ವಿದೇಶ

ನರೇಂದ್ರ ಮೋದಿಗೆ ರಷ್ಯಾದ ಅತ್ಯುನ್ನತ ಪ್ರಶಸ್ತಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಆರ್ಡರ್‌ ಆಫ್ ಸೇಂಟ್‌ ಆಂಡ್ರ್ಯು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಶುಕ್ರವಾರ ಈ ಘೋಷಣೆ ಮಾಡಲಾಗಿದ್ದು, ಎರಡೂ ದೇಶಗಳ ಸಂಬಂಧ ಸಹಕಾರದಲ್ಲಿ ಈ ಪುರಸ್ಕಾರ ಮಹತ್ವದ್ದಾಗಿರಲಿದೆ. 1698ರಿಂದಲೂ ಈ ಪುರಸ್ಕಾರವನ್ನು ರಷ್ಯಾದಲ್ಲಿ ಅತ್ಯುನ್ನತ ಸೇವೆಗೈದ ನಾಗರಿಕರು ಹಾಗೂ ವಿದೇಶಿಯರಿಗೆ ನೀಡಲಾಗುತ್ತಿದೆ.

ರಷ್ಯಾ ಹಾಗೂ ಭಾರತೀ ಯರ ಮಧ್ಯೆ ಉತ್ತಮ ಸಂಬಂಧ ಸುಧಾರಣೆ ಮತ್ತು ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿಗೆ ಈ ಪುರಸ್ಕಾರ ನೀಡಲಾಗುತ್ತಿದೆ ಎಂದು ರಷ್ಯಾ ಸರಕಾರ ಹೇಳಿದೆ.

ಈ ಪುರಸ್ಕಾರವನ್ನು ನನಗೆ ಕೊಡಮಾಡಿದ್ದಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಹೇಳಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿಗೆ ಯುಎಇ ಝಾಯೇದ್‌ ಪುರಸ್ಕಾರ ನೀಡಿ ಗೌರವಿಸಿತ್ತು.

About the author

ಕನ್ನಡ ಟುಡೆ

Leave a Comment