ರಾಜ್ಯ ಸುದ್ದಿ

ನರೇಂದ್ರ ಮೋದಿ ಕಾರ್ಯವೈಖರಿಯಿಂದ ಸ್ಪೂರ್ತಿ, ಅರಮನೆ ಮೈದಾನ ಸ್ವಚ್ಛ: ರವಿ ಡಿ.ಚನ್ನಣ್ಣವರ್‌ ಶ್ಲಾಘನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯಿಂದ ಸ್ಪೂರ್ತಿಗೊಂಡ ಸ್ವಯಂಸೇವಕರು ಬೆಂಗಳೂರು ಅರಮನೆ ಮೈದಾನದ ಬಹಿರಂಗ ಸಮಾವೇಶದ ಸ್ಥಳವನ್ನು ಸ್ವಚ್ಛಗೊಳಿಸಿರುವುದು ಹಾಗೂ ಇವರ ಸೇವಾ ಕಾರ್ಯವನ್ನು ಡಿಸಿಪಿ ರವಿ ಡಿ.ಚನ್ನಣ್ಣವರ್‌ ಅವರು ಶ್ಲಾಘಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಶನಿವಾರ ಸಮಾವೇಶ ನಡೆದ ಸ್ಥಳದಲ್ಲಿದ್ದ ಕಸವನ್ನು ಸ್ವಚ್ಛಗೊಳಿಸುತ್ತಿದ್ದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ರವಿ ಚನ್ನಣ್ಣವರ್‌, ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಾರ್ಯಕರ್ತರೊಬ್ಬರು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಫೂರ್ತಿ ಸಾರ್‌ ಎಂದು ಹೇಳಿದ್ದಾರೆ. ”ಕಳೆದ ಐದು ವರ್ಷಗಳಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದೇವೆ. ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಜತೆಯಲ್ಲೇ ತಂದಿದ್ದೇವೆ,” ಎಂದು ಮಹಿಳೆಯೊಬ್ಬರು ಹೇಳಿದರು.

 

About the author

ಕನ್ನಡ ಟುಡೆ

Leave a Comment