ರಾಜಕೀಯ

ನರೇಂದ್ರ ಮೋದಿ ಬರುವವರೆಗೂ ಬಲಿಷ್ಠ ಪ್ರಧಾನಿ ಅಂದ್ರೆ ಏನು ಅಂತ ದೇಶಕ್ಕೆ ಗೊತ್ತಿರಲಿಲ್ಲ: ಎಸ್ಎಂ ಕೃಷ್ಣ

ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗೋವರೆಗೂ ದೇಶಕ್ಕೆ ಬಲಿಷ್ಠ ಪ್ರಧಾನಿ ಅಂದರೆ ಏನು ಎಂಬುದು ಗೊತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹೇಳಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದ ಗೌಡ ಪರ ಪ್ರಚಾರ ನಡೆಸುತ್ತಿರುವ ಎಸ್ಎಂ ಕೃಷ್ಣ ಅವರು, ಈಗ ನಡೆಯುತ್ತಿರುವ ಚುನಾವಣೆ ದೇಶದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಚುನಾವಣೆ. ಕಳೆದ 5 ವರ್ಷಗಳಲ್ಲಿ ನಮ್ಮ ದೇಶ ನಡೆದು ಬಂದ ದಾರಿಯನ್ನು ಹಿಂದಿರುಗಿ ನೋಡಿದಾಗ ಸಮಾಧಾನ, ಸಂತೋಷ ಅನಿಸುತ್ತದೆ ಎಂದರು. ನರೇಂದ್ರ ಮೋದಿ ಅವರು ಗುಜರಾತ್ ನಿಂದ ದೆಹಲಿಗೆ ಬರುವವರೆಗೂ ಅವರ ಶಕ್ತಿಯ ಪರೀಕ್ಷೆ ನಡೆದಿರಲಿಲ್ಲ. ದೇಶದ ಅದೃಷ್ಟಕ್ಕೆ ಮೋದಿ ಅವರು ಶಿಶುವಾಗಿ ಬಂದರು. ಮೋದಿ ಪ್ರಧಾನಿ ಆಗುವುದಕ್ಕೂ ಮುನ್ನ ಹಲವಾರು ಹಗರಣಗಳು ದೇಶದ ಜನತೆಯನ್ನು ಕಾಡುತ್ತಿದ್ದವು. ಸಮ್ಮಿಶ್ರ ಸರ್ಕಾರದಲ್ಲಿ ಸ್ವಇಚ್ಛೆಯಿಂದ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಮೂಡಿತ್ತು. ಹೀಗಾಗಿ ದೇಶಕ್ಕೆ ಭದ್ರ ನಾಯಕತ್ವಬೇಕು ಎಂದು ಜನ ತೀರ್ಮಾನಿಸಿದರು. ಆ ಸಮಯದಲ್ಲಿ ಮೋದಿ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದರು ಎಂದು ಕೃಷ್ಣ ನೆನಪಿಸಿದರು.

About the author

ಕನ್ನಡ ಟುಡೆ

Leave a Comment