ರಾಷ್ಟ್ರ ಸುದ್ದಿ

ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ತಮಗೆ ಕಂಟಕ ಖಚಿತ ಎಂಬುದು ವಿಪಕ್ಷಗಳ ಭಯ

ಭಾಗಲ್ಪುರ, ಬಿಹಾರ : ‘ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ತಮ್ಮ ಭ್ರಷ್ಟಾಚಾರದ ದುಕಾನ್‌ಗಳು ಮುಚ್ಚಿಹೋಗುತ್ತವೆ ಮತ್ತು ತಮ್ಮ ವಂಶಾಡಳಿತೆ ಕೂಡ ಕೊನೆಗೊಳ್ಳುತ್ತದೆ ಎಂಬ ಭಯದಲ್ಲಿ ಕಾಂಗ್ರೆಸ್‌ ನೇತೃತ್ವದ ಮಹಾ ಮಿಲಾವಟೀ ವಿರೋಧ ಪಕ್ಷಗಳು ದೇಶ್‌ ಬಚಾವೋ ಎಂದು ಹುಯಿಲೆಬ್ಬಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಹೇಳಿದರು.‘ವಿರೋಧ ಪಕ್ಷಗಳು ಸೇನೆಗೆ ಕೊಟ್ಟಿರುವ ವಿಶೇಷಾಧಿಕಾರವನ್ನು ಕಿತ್ತುಕೊಳ್ಳಲು ಬಯಸಿವೆ; ಹಾಗಿದ್ದರೂ ಎನ್‌ಡಿಎ ಸರಕಾರ ಜವಾನರಿಗೆ ಭಯೋತ್ಪಾದಕರನ್ನು ಮತ್ತು ನಕ್ಸಲರನ್ನು ಮಟ್ಟ ಹಾಕುವ ಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ’ ಎಂದು ಮೋದಿ ಹೇಳಿದರು.‘ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಮತ್ತೆಂದೂ ಚುನಾವಣೆಯಾಗದು, ದೇಶದಲ್ಲಿ ಸರ್ವಾಧಿಕಾರ ಬರುತ್ತದೆ ಎಂದೆಲ್ಲ ಹುಯಿಲೆಬ್ಬಿಸುವ ಮಹಾ ಮಿಲಾವಟೀ ವಿರೋಧ ಪಕ್ಷಗಳಿಗೆ ನಿಜವಾಗಿಯೂ ಇರುವ ಭಯವೆಂದರೆ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ತಮ್ಮ ಭ್ರಷ್ಟಾಚಾರದ ಮಾರ್ಗಗಳು ಮುಚ್ಚಿಹೋಗುತ್ತವೆ ಎಂಬುದೇ ಆಗಿದೆ; ಹಾಗೆಯೇ ತಮ್ಮ ವಂಶಾಡಳಿತೆಯ ರಾಜಕಾರಣವೂ ಕೊನೆಗೊಳ್ಳುತ್ತದೆ ಎಂಬ ಭೀತಿ ಅವರಿಗಿದೆ’ ಎಂದು ಮೋದಿ ಹೇಳಿದರು.

About the author

ಕನ್ನಡ ಟುಡೆ

Leave a Comment