ರಾಜಕೀಯ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿ: ಹೆಚ್‍ಡಿಆರ್

ಮೈಸೂರು: 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಹೇಳಿದ್ದರು. ಆದರೆ ನಿವೃತ್ತಿ ಪಡೆಯದೆ 2019ರಲ್ಲೂ ಹಾಸನ ಬಿಟ್ಟು ತುಮಕೂರಿನಲ್ಲಿ ಸ್ಪರ್ಧಿಸಿದ್ದಾರೆ. ಈಗ ರಾಜಕೀಯ ನಿವೃತ್ತಿ ಪಡೆಯುವ ವರಸೆ ದೇವೇಗೌಡರ ಹಿರಿಯ ಮಗ ಹೆಚ್ ಡಿ ರೇವಣ್ಣ ಅವರದ್ದು. ಹೌದು ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ. ಇನ್ನು ವಾಸ್ತು, ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬುವ ಹೆಚ್ ಡಿ ರೇವಣ್ಣ ಅವರು, 22,6,8 ನಮಗೆ ಲಕ್ಕಿ, ನಾವು ರಾಜ್ಯದಲ್ಲಿ 22 ಲೋಕಸಭೆ ಸೀಟುಗಳನ್ನು ಗೆಲ್ಲುತ್ತೇವೆ. ಆ 22 ನಂಬರ್ ನಮಗೆ ಲಕ್ಕಿ. ಅದು ಯಡಿಯೂರಪ್ಪನವರಿಗೆ ಲಕ್ಕಿ ಆಗಲ್ಲ. 18 ನಂಬರ್ ಸಹ ನಮಗೆ ಲಕ್ಕಿಯೇ. 2018 ಇತ್ತು 8+1=9 ಅದಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು, ಈಗಲೂ 18ರಂದು ಚುನಾವಣೆ ಇದೆ. 1+8 ಈಗಲೂ ಯುಪಿಎ ಅಧಿಕಾರಕ್ಕೆ ಬರಲಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಸಿಎಚ್ ವಿಜಯ್ ಶಂಕರ್, ಆರ್ ಧ್ರುವನಾರಾಯಣ್ ಗೆ ಮತ ಹಾಕಿ. ಸಿದ್ದರಾಮಯ್ಯ ಮತ್ತು ದೇವೇಗೌಡರು ಒಟ್ಟಾಗಿ ಪ್ರಚಾರ ಮಾಡಲಿದ್ದಾರೆ. ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಅವರ ಗೆಲುವಿಗೆ ನಮ್ಮ ದೋಸ್ತಿ ಪಕ್ಷದ ನಾಯಕರು ಶ್ರಮವಹಿಸಿದ್ದಾರೆ ಎಂದರು.

About the author

ಕನ್ನಡ ಟುಡೆ

Leave a Comment