ರಾಷ್ಟ್ರ ಸುದ್ದಿ

ನರೇಂದ್ರ ಮೋದಿ ಸರ್ಕಾರದ ಮಹಾತ್ವಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆಗೆ ಅನುದಾನ ಕೊರತೆ!

ನವದೆಹಲಿ: ಕನಿಷ್ಟ 50 ಕೋಟಿ ಭಾರತೀಯರಿಗೆ ಉಪಯೋಗವಾಗುವ,  ಗಂಭೀರ ಕಾಯಿಲೆಗಳಿಗೆ ತುತ್ತಾಗಿರುವ ಜನರಿಗೆ ಯಾವುದೇ ಆಸ್ಪತ್ರೆಯಲ್ಲಾದರೂ ಉಚಿತ ಚಿಕಿತ್ಸೆ ಸಿಗುವಂತೆ ಜಾರಿಯಾಗಿರುವ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಗೆ ಆರ್ಥಿಕ ಕೊರತೆ ಎದುರಾಗಿದೆ.
ಈಗಾಗಲೇ ನೀಡಲಾಗಿರುವ ಅನುದಾನ ಸಲಾದೇ ಯೋಜನೆಯನ್ನು ನಿರ್ವಹಿಸಲು ಮತ್ತಷ್ಟುಅನುದಾನಕ್ಕೆ ಮನವಿ ಮಾಡಿ ಕೇಂದ್ರ ಹಣಕಾಸು ಇಲಾಖೆಯ ಮೊರೆ ಹೋಗಿದೆ. ಈ ವರ್ಷದ ಬಜೆಟ್ ನಲ್ಲಿ 2,000 ಕೋಟಿ ರೂಪಾಯಿಗಳ ಅನುದಾನವನ್ನು ನೀಡಲಾಗಿತ್ತು. ಆದರೆ ಈ ಮೊತ್ತ ಖರ್ಚಾಗಿದ್ದು 4,500 ಕೋಟಿರೂಪಾಯಿ ಹೆಚ್ಚಿನ ಅನುದಾನಕ್ಕಾಗಿ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹಣಕಾಸು ಇಲಾಖೆಗೆ ಮನವಿ ಮಾಡಿದೆ. ಎನ್ ಹೆಚ್ಎ ಪ್ರಕಾರ ಪ್ರಾರಂಭಿಕ ಕಾರ್ಯಾಚರಣೆಗೆ, ಈಗಗಾಲೇ ಬಿಡುಗಡೆ ಮಾಡಲಾಗಿರುವ ಅನುದಾನದ ಮೊತ್ತವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಯೋಜನೆಯ ಜಾರಿಗೆ ಹಣದ ಕೊರತೆ ಸಮಸ್ಯೆಯಾಗುವುದಿಲ್ಲವಂತೆ. ಯೋಜನೆ ಯಶಸ್ವಿಯಾಗಿ ಜಾರಿಯಾಗುವುದಕ್ಕೆ ಅಗತ್ಯವಿರುವ ಪರಿಷ್ಕೃತ ಅಂದಾಜು ಪಟ್ಟಿಯನ್ನು ಆರ್ಥಿಕ ಇಲಾಖೆಗೆ ಕಳಿಸಿಕೊಟ್ಟಿದ್ದೇವೆ ಈಗಾಗಲೇ ಕಳಿಸಿಕೊಟ್ಟಿದ್ದೇವೆ ಹಣಕಾಸು ಇಲಾಖೆಯಿಂದ ಅನುಮೋದನೆಯನ್ನು ಎನ್ ಹೆಚ್ ಎ ಎದುರುನೋಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment