ಸುದ್ದಿ

ನಲಪಾಡ್ ನಿಂದ ಬಾರಿಪ್ರಮಾಣದ ಹಲ್ಲೆ ನಡೆದಿದೆ ಹೈಕೋರ್ಟ್

ಬೆಂಗಳೂರು:  ಫೆಬ್ರವರಿ 17 ರಂದು ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮೊಹಮದ್ ನಲಪಾಡ್ ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಿಂದ ಮಹತ್ವದ ಆದೇಶ  ತೀರ್ಪು ನೀಡಿದೆ.

ಕೆಫೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೋಡಿದ ಮೇಲೆ ಮೊಹಮದ್ ನಲಪಾಡ್ ಗೆ ಜಾಮೀನು ನೀಡಲು ನಿರಾಕರಿಸಿದೆ. ಮೊಹಮದ್ ನಲಪಾಡ್  ಜಾಮೀನು ಅರ್ಜಿ ವಿಚಾರಣೆ ತೀರ್ಪು ಕೇಳಲು ನ್ಯಾಯಾಲಯದಲ್ಲಿ ಜನ ಕೊಡ ಸೇರಿದ್ದರು.

ವಿದ್ವತ್ ಮೇಲೆ ದಾಳಿ ನಡೆಸಿರುವುದು ವೀಡಿಯೋ ದೃಶ್ಯಗಳಿಂದ ಸಾಬೀತಾಗಿದೆ. ಹೀಗಾಗಿ ಪ್ರಕರಣದ ತನಿಖೆ ಪೂರ್ಣವಾಗುವವರೆಗೆ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು  ಜಾಮೀನು ನಿರಾಕರಿಸಿರುವುದಾಗಿ ತಿಳಿಸಿದ್ದಾರೆ.ವಿಚಾರಣಾಧೀನ ನ್ಯಾಯಾಲಯ ಜಾಮೀನು ನಿರಾಕರಿಸಿದ ಮೇಲೆ ಮೊಹಮದ್ ಹೈಕೋರ್ಟ್ ಗೆ ತೆರಳಿದ್ದರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಜಾಮೀನು ನಿರಾಕರಿಸಲಾಗಿದೆ.

ಇದೊಂದು ಘನಘೋರ ಹಲ್ಲೆ ಪ್ರಕರಣ ಘಟನೆ ನಡೆದ ಸ್ಥಳದಲ್ಲಿ ನೂರಾರು ಮಂದಿ ಇದ್ದರೂ ಯಾರೂ ಸಹಾಯಕ್ಕೆ ಬಂದಿಲ್ಲ. ಇದರಿಂದಲೇ ನಲಪಾಡ್‌ನ ಪ್ರಭಾವ ಎಷ್ಟು ಎಂಬುದು ತಿಳಿಯಲಿದೆ. ಇನ್ನೂ ಹೈಕೋರ್ಟ್ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಮೊಹಮದ್ ನಲಪಾಡ್ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.

 

 

About the author

ಕನ್ನಡ ಟುಡೆ

Leave a Comment