ಆಹಾರ

ನವಣೆ ಸ್ವೀಟ್‌ ಪೊಂಗಲ್‌ ರೆಸಿಪಿ

ಸಾಮಗ್ರಿ:

1. ನೆಂದ ನವಣೆ-1 ಕಪ್‌

2. ಹೆಸರು ಬೇಳೆ-ಅರ್ಧ ಕಪ್‌

3. ಏಲಕ್ಕಿ ಪುಡಿ-ಸ್ವಲ್ಪ

4. ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ದ್ರಾಕ್ಷಿ-50 ಗ್ರಾಂ

5. ಪಚ್ಚ ಕರ್ಪೂರ-1 ಚಿಟಿಕೆ

6. ಜಾಕಾಯಿ ಪುಡಿ-1 ಚಿಟಿಕೆ

7. ಲವಂಗ-4

8. ಪುಡಿ ಬೆಲ್ಲ-ಒಂದೂವರೆ ಕಪ್‌

9. ತುಪ್ಪ-ಅರ್ಧ ಕಪ್‌

10. ಒಣ ಕೊಬ್ಬರಿ ತುರಿ-ಕಾಲು ಕಪ್‌

11. ಹಾಲು-4 ಕಪ್‌

ಮಾಡುವ ವಿಧಾನ:
ಎರಡು ಟೇಬಲ್‌ ಸ್ಪೂನ್‌ ತುಪ್ಪ ಬಿಸಿ ಮಾಡಿ ನವಣೆ ಮತ್ತು ಹೆಸರು ಬೇಳೆ ಹಾಕಿ ಎರಡು ನಿಮಿಷ ಹುರಿಯಿರಿ. ಇದಕ್ಕೆ ಹಾಲು, ಜಾಕಾಯಿ ಪುಡಿ, ಪಚ್ಚ ಕರ್ಪೂರ, ಲವಂಗ ಸೇರಿಸಿ ಕುಕ್ಕರ್‌ನಲ್ಲಿಟ್ಟು ಮೂರು ಸೀಟಿ ಕೂಗಿಸಿ. ಈ ಮಿಶ್ರಣ ತಣ್ಣಗಾದ ನಂತರ ಬೆಲ್ಲ, ಏಲಕ್ಕಿ ಪುಡಿ, ಒಣ ಕೊಬ್ಬರಿ ಮತ್ತು ಮಿಕ್ಕ ತುಪ್ಪ ಸೇರಿಸಿ ಐದು ನಿಮಿಷ ಬೇಯಿಸಿ. ಕೊನೆಗೆ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ.

About the author

ಕನ್ನಡ ಟುಡೆ

Leave a Comment