ರಾಷ್ಟ್ರ ಸುದ್ದಿ

ನವದೆಹಲಿ: ನೇಷನ್ ವಿತ್ ನಮೋ ಬಿಜೆಪಿ ಅಭಿಯಾನ

ನವದೆಹಲಿ: ಹಿಂದಿ ಭಾಷಿಕರ ಪ್ರಾಬಲ್ಯದ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಎಚ್ಚೆತ್ತಿರುವ ಬಿಜೆಪಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ 2014ರ ಮಾದರಿ ಫಲಿತಾಂಶವನ್ನು ಪುನಃ ಪಡೆಯಲು ರಣತಂತ್ರ ಹೆಣೆಯುತ್ತಿದೆ. ನೇಷನ್ ವಿತ್ ನಮೋ, ಪೆಹಲಾ ವೋಟ್ ಮೋದಿ ಕೆ ನಾಮ್ ಎಂಬ ಅಭಿಯಾನದ ಮೂಲಕ ಯುವ ಮತದಾರರು ಮತ್ತು ಮೊದಲ ಬಾರಿ ಮತ ಚಲಾಯಿಸುವವರನ್ನು ಸೆಳೆಯಲು ಪಕ್ಷ ನಿರ್ಧರಿಸಿದೆ.

ಹಿರಿಯ ಪದಾಧಿಕಾರಿ ಯೊಬ್ಬರು ನೀಡಿರುವ ಮಾಹಿತಿ ಯಂತೆ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬಿಜೆಪಿಯ ಲೋಕಸಭಾ ಚುನಾವಣೆ ಮಂತ್ರವಾಗಿ ಮುಂದುವರಿಯಲಿದೆ. ಮಹಿಳೆಯರು, ಯೋಧರು, ದಲಿತರು, ಯುವಕರು, ಕೃಷಿಕರನ್ನು ಗುರಿಯಾಗಿಸಿ ಪ್ರಣಾಳಿಕೆ ರೂಪಿಸಲಾಗುತ್ತಿದೆ. ಜತೆಗೆ ಪ್ರತಿ ಗ್ರಾಮದಲ್ಲಿ ಸಭೆಗಳು, ಕಿಸಾನ್ ಕುಂಭಮೇಳ, ಭೀಮ್ ಸಾಮರಸ್ಯ ಭೋಜನ, ಉಜ್ವಲ ರಸೋಯಿ ಕಾರ್ಯಕ್ರಮ ಆಯೋಜನೆಗೂ ಬಿಜೆಪಿ ಚಿಂತಿಸಿದೆ.

50 ಲಕ್ಷ ಯುವಕರ ಸಂಕಲ್ಪ: ಜ.12ಕ್ಕೆ ನೇಷನ್ ವಿತ್ ನಮೋ ಅಭಿಯಾನವನ್ನು ಔಪಚಾರಿಕವಾಗಿ ಆರಂಭಿಸಲಾಗುವುದು. 50 ಲಕ್ಷ ಯುವಕರಿಗೆ ಸಂಕಲ್ಪ ಮಾಡಿಸಲಾಗುವುದು. ಅವರನ್ನು ನೇಷನ್ ವಿತ್ ನಮೋ ಸ್ವಯಂಸೇವಕರು ಎಂದು ಕರೆಯಲಾಗುವುದು. ಜ.15ರಿಂದ ಫೆ.10ರವರೆಗೆ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಲು ಕೂಡ ತೀರ್ವನಿಸಲಾಗಿದೆ.

About the author

ಕನ್ನಡ ಟುಡೆ

Leave a Comment